ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ವಿದ್ಯುತ್ ದರ ಏರಿಕೆಗೆ ಸಿದ್ಧತೆ ನಡೆಸಿದೆ. ಏಪ್ರಿಲ್ ನಿಂದ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಪ್ರತಿ ಯೂನಿಟ್ ಗೆ 50 ಪೈಸೆ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ. ಐದು ವಿದ್ಯುತ್ ಸರಬರಾಜು ಕಂಪನಿಗಳು 2025-26ನೇ ಸಾಲಿನ ವಿದ್ಯುತ್ದರವನ್ನು ಪರೀಷ್ಕರಿಸಿ ಯೂನಿಟ್ ಗೆ ಸರಾಸರಿ 68 ಪೈಸೆ ಹೆಚ್ಚಳ ಮಾಡುವಂತೆ ಕೋರಿದ್ದು, ಆಯೋಗವು 14-18ಪೈಸೆ ಹೆಚ್ಚಳ ಮಾಡುವ ಉದ್ದೇಶ ಹೊಂದಿದೆ.
ಬಹುವಾರ್ಷಿಕ ದರ ಪದ್ಧತಿಗೆ ಅನುಗುಣವಾಗಿ 2026-27ನೇ ಸಾಲಿನ ದರ ಹೆಚ್ಚಲವನ್ನು ಕಳೆದ ವರ್ಷದ ಮಾರ್ಚ್ ನಲ್ಲಿ ಪ್ರಕಟಿಸಲಾಗಿದೆ ಆ ಪ್ರಕಾರ ಬರುವ ಏಪ್ರಿಲ್ ಒಂದರಿಂದ ಅದು ಯೂನಿಟ್ ಗೆ 35 ಪೈಸೆ ಹೆಚ್ಚಳವಾಗಲಿದೆ. ಈ 35 ಪೈಸೆ ಹಾಗೂ ಈಗ ಪರಿಷ್ಕರಣೆಯಾಗಲಿರುವ ದರ ಎರಡೂ ಸೇರಿ ಯೂನಿಟ್ ಗೆ 50ಪೈಸೆ ಹೆಚ್ಚಳವಾಗಬಹುದು ಎಂದು ಆಯೋಗ ತಿಳಿಸಿದೆ.

