HomeKarnatakaವಿದ್ಯುತ್ ಬಳಕೆದಾರರಿಗೆ ಬಿಗ್ ಶಾಕ್: ಬಿಲ್ ಸರಾಸರಿ ಮೊತ್ತದ ಎರಡು ಪಟ್ಟು ಠೇವಣಿ ಇಲ್ಲದಿದ್ದರೆ ಕರೆಂಟ್...

ವಿದ್ಯುತ್ ಬಳಕೆದಾರರಿಗೆ ಬಿಗ್ ಶಾಕ್: ಬಿಲ್ ಸರಾಸರಿ ಮೊತ್ತದ ಎರಡು ಪಟ್ಟು ಠೇವಣಿ ಇಲ್ಲದಿದ್ದರೆ ಕರೆಂಟ್ ಕಟ್

ಬಳ್ಳಾರಿ: ಬಳ್ಳಾರಿ ಗ್ರಾಮೀಣ ಜೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್‌ನ ಸರಾಸರಿ ಮೊತ್ತ ಠೇವಣಿಯಲ್ಲಿಡಲು ಸೂಚನೆ ನೀಡಲಾಗಿದೆ.

ಜೆಸ್ಕಾಂ ಬಳ್ಳಾರಿ ಗ್ರಾಮೀಣ ಉಪ-ವಿಭಾಗ ಮತ್ತು ಜೆಸ್ಕಾಂ ಕುರುಗೋಡು ಉಪ-ವಿಭಾಗದ ವಿದ್ಯುತ್ ಗ್ರಾಹಕರು ಜನವರಿ-2023 ರಿಂದ ಡಿಸೆಂಬರ್-23 ವರೆಗೆ ಬಳಸಲಾದ ಒಟ್ಟು ವಿದ್ಯುತ್ ಬಿಲ್ಲಿನ ಸರಾಸರಿ ಮೊತ್ತದ, ಎರಡು ಪಟ್ಟು ಮೊತ್ತವನ್ನು ಖಾತೆಯಲ್ಲಿ ಠೇವಣಿ ರೂಪದಲ್ಲಿ ಇರಬೇಕು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್‌ ಬಾಬು ಅವರು ತಿಳಿಸಿದ್ದಾರೆ.

ವಿದ್ಯುತ್ ಗ್ರಾಹಕರು ತಮ್ಮ ಖಾತೆಯಲ್ಲಿ ಈಗಾಗಲೇ ಇರುವಂತಹ ಠೇವಣಿ, ಈ ಮೊತ್ತಕ್ಕಿಂತ ಕಡಿಮೆ ಇದ್ದಲ್ಲಿ ಅದನ್ನು ನಿಗಮವು ಅಧಿಕ ಭದ್ರತಾ ಠೇವಣಿ(ಎ.ಎಸ್.ಡಿ) ರೂಪದಲ್ಲಿ ವಸೂಲಿ ಮಾಡುವ ಹಕ್ಕು ಹೊಂದಿರುತ್ತದೆ. ತಮ್ಮ ವಿದ್ಯುತ್ ಬಿಲ್ಲಿನ ಕೆಳ ಭಾಗದಲ್ಲಿ ಎ.ಎಸ್.ಡಿ ಎಂದು ನಮೂದಾಗಿರುವ ಮೊತ್ತವನ್ನು ಆ.29 ರೊಳಗೆ ಪಾವತಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊತ್ತವನ್ನು ಜೆಸ್ಕಾಂ ಕಚೇರಿ ಅಥವಾ ಆನ್‌ಲೈನ್ www.gescom.online.payment ಮೂಲಕ ಪಾವತಿಸಬಹುದು. ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular