HomeKarnatakaವಿದ್ಯುತ್ ಬಿಲ್ ನಲ್ಲಿಯೂ ಸುಲಿಗೆ: ಗ್ರಾಹಕರಿಗೆ ಕಾಂಗ್ರೆಸ್ ಸರ್ಕಾರದಿಂದ ಕರೆಂಟ್ ಶಾಕ್; ಬಿಜೆಪಿ ಆಕ್ರೋಶ

ವಿದ್ಯುತ್ ಬಿಲ್ ನಲ್ಲಿಯೂ ಸುಲಿಗೆ: ಗ್ರಾಹಕರಿಗೆ ಕಾಂಗ್ರೆಸ್ ಸರ್ಕಾರದಿಂದ ಕರೆಂಟ್ ಶಾಕ್; ಬಿಜೆಪಿ ಆಕ್ರೋಶ

ಬೆಂಗಳೂರು: ರಾಜ್ಯದ ಖಜಾನೆಯನ್ನು ಗುಡಿಸಿ ಗುಂಡಾಂತರ ಮಾಡಿರುವ ಕಾಂಗ್ರೆಸ್‌ ಸರ್ಕಾರ ಈಗ ದಿನನಿತ್ಯದ ಖರ್ಚಿಗೆ ಜನರನ್ನು ಸುಲಿಗೆ ಮಾಡಲು ನಿಂತಿದೆ ಎಂದು ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.

ಸಿಎಂ ಸಿದ್ದರಾಮಯ್ಯ ಅವರ ದಿವಾಳಿ ಸರ್ಕಾರದಲ್ಲಿ, ಬೆಲೆ ಹೆಚ್ಚಳ ಮಾಡಿ ಜನರಿಗೆ ಬರೆ ಹಾಕಿದ್ದ ಕೈಗಳು ಈಗ ವಿದ್ಯುತ್‌ ಬಿಲ್‌ನಲ್ಲೂ ಮೋಸ ಮಾಡಿ ಗ್ರಾಹಕರಿಗೆ ಶಾಕ್‌ ನೀಡುತ್ತಿದೆ. ಗ್ಯಾರಂಟಿ ವೆಚ್ಚದಿಂದ ಆರ್ಥಿಕವಾಗಿ ಕಂಗೆಟ್ಟ ಇಂಧನ ಇಲಾಖೆ ಒಂದಿಲ್ಲೊಂದು ರೀತಿಯಲ್ಲಿ ಲೂಟಿಗೆ ನಿಂತು ಜನಸಾಮಾನ್ಯರ ಬದುಕು ದುರ್ಬರಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮನೆಯಲ್ಲಿ ವಾಸವಿಲ್ಲದವರಿಗೂ, ಕಡಿಮೆ ವಿದ್ಯುತ್ ಬಳಸುವವರಿಗೂ ಹೆವಿ ಲೋಡ್ ಹೆಸರಲ್ಲಿ ದುಬಾರಿ ಮೊತ್ತದ ಬಿಲ್ ಪಾವತಿಗೆ ಹೇಳಿ ಗ್ರಾಹಕರಿಗೆ ಶಾಕ್ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಜನರಿಗೆ ಕರೆಂಟ್ ಶಾಕ್ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular