ಗಮನಿಸಿ: ಜೂನ್‌ನಿಂದ ದುಬಾರಿಯಾಗಲಿವೆ ಎಲೆಕ್ಟ್ರಿಕ್ ವಾಹನಗಳು….!

ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಸಬ್ಸಿಡಿ ನೀಡುವ ಫೇಮ್-2 ಯೋಜನೆಯನ್ನು ಇದೇ ಜೂನ್ 1ರಿಂದ ಸರ್ಕಾರ ಹಿಂತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಇವಿಗಳ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ.

ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳ ತ್ವರಿತ ಅಳವಡಿಕೆ ಹಾಗೂ ಉತ್ಪಾದನೆ (ಫೇಮ್) ಯೋಜನೆಯಡಿ, ಇವಿ ವಾಹನದ ಬೆಲೆಯ 40%ರಷ್ಟು ಗರಿಷ್ಠ ಮಿತಿಯಲ್ಲಿ, ಬ್ಯಾಟರಿ ಪ್ಯಾಕ್‌ನ ಪ್ರತಿ ಕಿವ್ಯಾಗೆ 10,000 ರೂ.ನಂತೆ ಸಬ್ಸಿಡಿ ನೀಡಲಾಗುತ್ತಿದೆ.

ಸದ್ಯದ ಮಟ್ಟಿಗೆ ಫೇಮ್-2ನ ವಿಸ್ತರಣೆ ಅಥವಾ ಫೇಮ್-3ಯ ಸಂಭವನೀಯ ನೀತಿಯ ಕುರಿತು ಸರ್ಕಾರದಿಂದ ಯಾವುದೇ ಮಾತು ಹೊರಬಾರದೇ ಇರುವ ಕಾರಣ ಎಲೆಕ್ಟ್ರಿಕ್ ವಾಹನಗಳಿಗೆ ನೀಡುತ್ತಿದ್ದ ಸಬ್ಸಿಡಿ ನಿಲ್ಲುವ ಸಾಧ್ಯತೆ ಇದೆ.

ಇನ್ನೂ ಆರಂಭಿಕ ಹಂತದಲ್ಲಿರುವ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಯ ನಿಟ್ಟಿನಲ್ಲಿ ಫೇಮ್-2ನ ಮುಂದುವರಿಕೆ ಅಥವಾ ಫೇಮ್-3ಯ ರೂಪುರೇಷೆಗಳನ್ನು ಪ್ರಚುರಪಡಿಸುವಂತೆ ಇವಿ ಉತ್ಪಾದಕರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ 24 ಇವಿ ಉತ್ಪಾದಕರು ಹಾಗೂ ಕೇಂದ್ರ ಸರ್ಕಾರಗಳ ನಡುವೆ ಮಾತುಕತೆಗಳು ನಡೆದಿವೆ.

ಪ್ರಸಕ್ತ ಚಾಲ್ತಿಯಲ್ಲಿರುವ ನೀತಿಯ ಬದಲಿಗೆ ಇವಿಗಳ ಬೆಲೆಯ 15%ನಷ್ಟು ಮೌಲ್ಯವನ್ನು ಸಬ್ಸಿಡಿಯಾಗಿ ನೀಡುವಂತೆ ಸರ್ಕಾರಕ್ಕೆ ಇವಿಗಳ ಉತ್ಪಾದಕರು ಮನವಿ ಮಾಡಿಕೊಂಡಿದ್ದಾರೆ.

ಸದ್ಯ 2.25 ಕಿವ್ಯಾ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಟಿವಿಎಸ್‌ ಐಕ್ಯೂಬ್‌ಗೆ 22,500  ರೂ. ಸಬ್ಸಿಡಿ ನೀಡಲಾಗುತ್ತಿದೆ. ಒಂದು ವೇಳೆ ಇದೇ ವಾಹನದ 15% ಮೌಲ್ಯವನ್ನು ಸಬ್ಸಿಡಿ ನೀಡುವುದಾದರೆ, ಸಬ್ಸಿಡಿ ಮೊತ್ತವು 14,870 ರೂ.ಗಳಿಗೆ ಇಳಿಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read