ಬಳ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಪಂಜಾಬಿ ಗಾಯಕ ಸಿದ್ಧು ಮೂಸೇವಾಲ ತಮ್ಮ ಹಿಂದೆ ದೊಡ್ಡದೊಂದು ಗಾಯನ ಲೋಕ ಸೃಷ್ಟಿಸಿ ಹೊರಟಿದ್ದಾರೆ. ’ಸೋ ಹೈ’, ’ತೋಚನ್’ ಮತ್ತು ’ದಿ ಲಾಸ್ಟ್ ರೈಡ್’ ಸೇರಿದಂತೆ ಸಿದ್ಧುರ ಕೆಲವೊಂದು ಹಾಡುಗಳು ಯೂಟ್ಯೂಬ್‌ನಲ್ಲಿ ಅನೇಕ ದಾಖಲೆಗಳನ್ನು ಸೃಷ್ಟಿಸಿವೆ.
ಹಿರಿಯ ವ್ಯಕ್ತಿಯೊಬ್ಬರು ಸಿದ್ಧುರ ಜನಪ್ರಿಯ ಹಾಡು ’295’ಗೆ ಸಾರಂಗಿ ವಾದ್ಯದ ದನಿ ನೀಡುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್ ಆಗಿದೆ.
ಸಕೂನ್ ಸಿಂಗ್ ಎಂಬ ಹೆಸರಿನ ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಚಂಡೀಘಡದ ಸೆಕ್ಟರ್ 17ರ ನಿವಾಸಿಯಾದ ಈ ಹಿರಿಯ ವ್ಯಕ್ತಿ ಹೀಗೆ ವಾದ್ಯ ನುಡಿಸುತ್ತಿರುವುದನ್ನು 48 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ನೋಡಬಹುದಾಗಿದೆ.
“ಸೆಕ್ಟರ್ 17 ಚಂಡೀಘಡ. ಈ ಟ್ಯೂನ್ ಯಾವುದೆಂದು ಗೆಸ್ ಮಾಡಬಲ್ಲಿರಾ?” ಎಂದು ಪೊಸ್ಟ್‌ಗೆ ಕ್ಯಾಪ್ಷನ್ ಹಾಕಲಾಗಿದೆ.
https://twitter.com/SakoonSingh/status/1639832610548637697?ref_src=twsrc%5Etfw%7Ctwcamp%5Etweetembed%7Ctwterm%5E1639832610548637697%7Ctwgr%5Ea9592467f3d8f0c96555d9ccc5ca1e85ce4c5564%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Felderly-man-plays-sidhu-moose-walas-295-on-sarangi-in-chandigarhs-sector-17-internet-loves-it-2351974-2023-03-27