ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪಡೆಯುವ ಗ್ರಾಹಕರಿಗೆ ಆಧಾರ್ ದೃಢೀಕರಣ ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದೀಗ ಎಲ್ಪಿಜಿ ಸಿಲಿಂಡರ್ ಬಳಕೆದಾರರಿಗೆ ಮತ್ತೊಂದು ಮಹತ್ವದ ಅಪ್ಡೇಟ್ ಬಂದಿದೆ.
ಆಧಾರ್ ಬಯೋಮೆಟ್ರಿಕ್ ದೃಢೀಕರಣ ಅಥವಾ e-KYC ಪೂರ್ಣಗೊಳಿಸದ ಗ್ರಾಹಕರ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಸೇವೆಯನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಇಂಡೇನ್ ಗ್ಯಾಸ್, ಎಚ್ಪಿ ಗ್ಯಾಸ್ ಹಾಗೂ ಭಾರತ್ ಗ್ಯಾಸ್ ಗ್ರಾಹಕರಲ್ಲಿ e-KYC ಪೂರ್ಣಗೊಳಿಸದವರಿಗೆ ಗ್ಯಾಸ್ ಬುಕ್ಕಿಂಗ್ಗೆ ನಿರ್ಬಂಧ ಎದುರಾಗಬಹುದು.
ಅಕ್ಟೋಬರ್ 1ರಿಂದ e-KYC ಪೂರ್ಣಗೊಳಿಸಿದ ಅರ್ಹ ಗ್ರಾಹಕರಿಗಷ್ಟೇ ಸಬ್ಸಿಡಿ ದರದ ಅಡುಗೆ ಅನಿಲ ಸಿಲಿಂಡರ್ ಸಿಗಲಿದೆ ಎಂದು ವರದಿ ತಿಳಿಸಿದೆ. e-KYC ಪೂರ್ಣಗೊಳಿಸದಿದ್ದರೆ ಸಬ್ಸಿಡಿ ಪ್ರಯೋಜನ ಲಭ್ಯವಾಗುವುದಿಲ್ಲ.
e-KYC ಗಡುವು
ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಇನ್ನೂ ಅನೇಕ ಎಲ್ಪಿಜಿ ಗ್ರಾಹಕರು ಆಧಾರ್ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಅರ್ಹ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ಸಿಗುವಂತೆ ಮಾಡಲು ಆಧಾರ್ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ.
ಸೆಪ್ಟೆಂಬರ್ 14ರೊಳಗೆ e-KYC ಪೂರ್ಣಗೊಳಿಸದ ಗ್ರಾಹಕರ ಸಬ್ಸಿಡಿ ಪ್ರಯೋಜನ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
e-KYC ಮಾಡದಿದ್ದರೆ ಏನಾಗಬಹುದು?
-
e-KYC ಪೂರ್ಣಗೊಳಿಸದ ಗ್ರಾಹಕರ ಹೊಸ ಗ್ಯಾಸ್ ಸಿಲಿಂಡರ್ ರೀಫಿಲ್ ಬುಕ್ಕಿಂಗ್ಗೆ ನಿರ್ಬಂಧ ಎದುರಾಗಬಹುದು.
-
ಅರ್ಹತೆ ಇಲ್ಲದ ಗ್ರಾಹಕರಿಗೆ Direct Benefit Transfer (DBT) ಹಾಗೂ ಉದ್ದೇಶಿತ ಸಬ್ಸಿಡಿ ಪ್ರಯೋಜನಗಳು ಸ್ಥಗಿತಗೊಳ್ಳಬಹುದು.
-
ಆನ್ಲೈನ್ ಅಥವಾ ಸಂಬಂಧಿತ ಗ್ಯಾಸ್ ಕಂಪನಿಯ ಆ್ಯಪ್ ಮೂಲಕ e-KYC ಪೂರ್ಣಗೊಳಿಸಿದ ಬಳಿಕ ಸಂಪರ್ಕವನ್ನು ಮರು ಸಕ್ರಿಯಗೊಳಿಸಬಹುದು.
-
ನಂತರ ಅನ್ವಯವಾಗುವ ಸಬ್ಸಿಡಿ ಸೇರಿದಂತೆ ಸಾಮಾನ್ಯ ಗ್ಯಾಸ್ ಸೇವೆಗಳನ್ನು ಪಡೆಯಬಹುದು.
ಇಂಡೇನ್ ಗ್ಯಾಸ್ e-KYC ಮಾಡುವ ವಿಧಾನ
-
ಸ್ಮಾರ್ಟ್ಫೋನ್ನಲ್ಲಿ IndianOil One App ಮತ್ತು AadhaarFaceRD App ಡೌನ್ಲೋಡ್ ಮಾಡಿಕೊಳ್ಳಿ.
-
ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಮೂಲಕ ಲಾಗಿನ್ ಮಾಡಿ.
-
ನಿಮ್ಮ 16 ಅಂಕಿಗಳ LPG ID ಅನ್ನು ಲಿಂಕ್ ಮಾಡಿ.
-
ಹೋಮ್ ಸ್ಕ್ರೀನ್ನಲ್ಲಿರುವ My Profile ಆಯ್ಕೆಗೆ ಹೋಗಿ.
-
Re-KYC ಆಯ್ಕೆಯನ್ನು ಕ್ಲಿಕ್ ಮಾಡಿ.
-
Face Authentication ಮೂಲಕ ಬಯೋಮೆಟ್ರಿಕ್ ಪರಿಶೀಲನೆ ಪೂರ್ಣಗೊಳಿಸಿ.
ಭಾರತ್ ಗ್ಯಾಸ್ e-KYC ಮಾಡುವ ವಿಧಾನ
-
Hello BPCL App ಡೌನ್ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಿ.
-
ಹೋಮ್ಪೇಜ್ನಲ್ಲಿ ಕಾಣುವ e-KYC ಆಯ್ಕೆಯನ್ನು ಆರಿಸಿ.
-
ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಗಳ OTP ನಮೂದಿಸಿ.
-
ಅಗತ್ಯ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡು ಪ್ರಕ್ರಿಯೆ ಪೂರ್ಣಗೊಳಿಸಿ.
HP ಗ್ಯಾಸ್ ಗ್ರಾಹಕರು HP Pay App ಮೂಲಕ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಹೀಗಾಗಿ, ಇನ್ನೂ ಎಲ್ಪಿಜಿ ಸಂಪರ್ಕದ ಆಧಾರ್ ಬಯೋಮೆಟ್ರಿಕ್ e-KYC ಪೂರ್ಣಗೊಳಿಸದಿರುವ ಗ್ರಾಹಕರು ತಮ್ಮ ಸಂಬಂಧಿತ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ ಅಥವಾ ಸೇವಾ ಕೇಂದ್ರದ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸೂಕ್ತ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಿಲಿಂಡರ್ ರೀಫಿಲ್ ಬುಕ್ಕಿಂಗ್ ಅಥವಾ ಸಬ್ಸಿಡಿ ಪಡೆಯುವಲ್ಲಿ ಸಮಸ್ಯೆ ಎದುರಾಗಬಹುದು.

