ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಪ್ರತಿ 5 ವರ್ಷಗಳಿಗೊಮ್ಮೆ ಪಡಿತರ ಚೀಟಿದಾರರ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿರುವುದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಐದು ವರ್ಷಗಳ ಹಿಂದೆ ಇ-ಕೆವೈಸಿ ಮಾಡಿಸಿದ ಒಟ್ಟು 6,33,409 ಪಡಿತರ ಚೀಟಿದಾರರಿಗೆ ಮರು ಇ-ಕೆವೈಸಿ ದೃಡೀಕರಿಸಿಕೊಳ್ಳುವಂತೆ ಸೂಚಿಸಲಾಗಿತ್ತು.
ಈ ವರೆಗೆ 19,012 ಪಡಿತರ ಚೀಟಿದಾರರು ಇ-ಕೆವೈಸಿ ದೃಢೀಕರಿಸಿದ್ದು, ಉಳಿದ ಎಲ್ಲಾ ಅರ್ಜಿದಾರರು ಸೆಪ್ಟೆಂಬರ್ 2026ರ ಅಂತ್ಯದವರೆಗೆ ಇ-ಕೆವೈಸಿ ದೃಡೀಕರಿಸುವುದು ಕಡ್ಡಾಯವಾಗಿರುತ್ತದೆ.
ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ಬೇಟಿ ನೀಡಿ ಅರ್ಜಿದಾರರು ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಅವಕಾಶ ನೀಡಲಾಗಿದೆ.
ಇ-ಕೆವೈಸಿ ಮಾಡಿಸಿಕೊಳ್ಳದೆ ಇದ್ದಲ್ಲಿ ಆಹಾರಧಾನ್ಯ ವಿತರಣೆ ಸ್ಥಗಿತಗೊಳ್ಳುವ ಸಂಭವ ಇರುವುದರಿಂದ, ಎಲ್ಲಾ ಅರ್ಜಿದಾರರು ನಿಗದಿತ ಸಮಯದೊಳಗೆ (30-09-2026) ಸಮೀಪದ ನ್ಯಾಯಬೆಲೆ ಅಂಗಡಿಗೆ ಬೇಟಿ ನೀಡಿ ಇ-ಕೆವೈಸಿ ಮಾಡಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅಥವಾ ದೂ:08392-272557 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಉಪ ನಿರ್ದೇಶಕ ಕೆ.ಆರ್.ದೇವರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
ಬಳ್ಳಾರಿ: ಸಿರುಗುಪ್ಪ ನಗರಸಭೆ ಕಾರ್ಯಾಲಯ ವತಿಯಿಂದ ವಿವಿಧ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
2026-27ನೇ ಸಾಲಿನ ಎಸ್.ಎಫ್.ಸಿ. ಅನುದಾನದ ಎನ್.ಸಿ.ಎಸ್.ಪಿ. ಟಿ.ಎಸ್.ಪಿ, 7.25% ಮತ್ತು 5% ರ ಯೋಜನೆಗಳಡಿ ಈ ಕೆಳಕಂಡ ವಿವಿಧ ಸೌಲಭ್ಯಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸುವುದಕ್ಕಾಗಿ ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳು ಅರ್ಜಿ ಸಲ್ಲಿಸಿ ಈ ಯೋಜನೆಗಳನ್ನು ಪಡೆಯಬಹುದಾಗಿದೆ.
ವಿವಿಧ ಯೋಜನೆಗಳು:
ಎನ್.ಸಿ.ಪಿ. ಯೋಜನೆಯಡಿ:- ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಖಾಯಂ/ಹೊರಗುತ್ತಿಗೆ ಪೌರಕಾರ್ಮಿಕರು ಮಕ್ಕಳಿಗೆ ಪ್ರತ್ಸಾಹಧನ ವಿತರಿಸುವುದು (ಎಸ್.ಎಸ್.ಎಲ್.ಸಿ. ವ್ಯಾಸಾಂಗ ಮಾಡುತ್ತಿರುವ 05 ಮಕ್ಕಳಿಗೆ ತಲಾ ರೂ.3000, ಪಿ.ಯು.ಸಿ. ವ್ಯಾಸಂಗ ಮಾಡುತ್ತಿರುವ 06 ಮಕ್ಕಳಿಗೆ ತಲಾ ರೂ.4500, ಮತ್ತು ಪದವಿ ವ್ಯಾಸಾಂಗ ಮಾಡುತ್ತಿರುವ 06 ಮಕ್ಕಳಿಗೆ ತಲಾ ರೂ. 6000 ಪ್ರೋತ್ಸಾಹಧನ ವಿತರಿಸುವುದು).
7.25%. ಯೋಜನೆಯಡಿ ಇತರೆ ಹಿಂದುಳಿದ ವರ್ಗದ ಜಾತಿಯ ಬಿ.ಇ ವ್ಯಾಸಂಗ ಮಾಡುತ್ತಿರುವ ಒಬ್ಬ ವಿಧ್ಯಾರ್ಥಿಗೆ ಮತ್ತು ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡುತ್ತಿರುವ ಒಬ್ಬ ವಿಧ್ಯಾರ್ಥಿಗೆ ಉಪಕರಣಗಳ ಖರೀದಿಗಾಗಿ ಸಹಾಯಧನ ನೀಡುವುದು.
5%. ಯೋಜನೆಯಡಿ ಎಸ್.ಎಸ್.ಎಲ್.ಸಿ. ಓದುತ್ತಿರುವ ಸಿರುಗುಪ್ಪ ನಗರದ 10 ವಿಕಲಚೇತನ ವಿದ್ಯಾರ್ಥಿಗಳಿಗೆ ತಲಾ ರೂ.3000, ಪಿ.ಯು.ಸಿ. ಓದುತ್ತಿರುವ 10 ವಿಕಲಚೇತನ ವಿದ್ಯಾರ್ಥಿಗಳಿಗೆ ತಲಾ ರೂ. 4500, ಬಿ.ಎ/ ಬಿ.ಕಾಂ/ ಬಿ.ಎಸ್.ಸಿ./ ಬಿ.ಬಿ.ಎ/ ಬಿ.ಸಿ.ಎ.ಇತರೆ ಪದವಿ ಓದುತ್ತಿರುವ 06 ವಿಕಲಚೇತನ ವಿದ್ಯಾರ್ಥಿಗಳಿಗೆ ತಲಾ ರೂ. 6000, ಪ್ರೋತ್ಸಾಹ ಧನ ನೀಡಲಾಗುವುದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
*ಅರ್ಜಿಯೊಂದಿಗೆ ಜಾತಿ/ಆದಾಯ ಪ್ರಮಾಣಪತ್ರ,
*ಕುಟುಂಬ ಸದಸ್ಯರ ರೇಷನ್ ಕಾರ್ಡ್/ ಆಧಾರ್ ಕಾರ್ಡ್,
* ಅಭ್ಯರ್ಥಿಯ ಇತ್ತಿಚಿನ 2 ಭಾವಚಿತ್ರ
*ಸಮಾಜ ಕಲ್ಯಾಣ ಇಲಾಖೆಯಿಂದ ಸದರಿ ಸೌಲಭ್ಯವನ್ನು ಪಡೆದಿರುವುದಿಲ್ಲವೆಂಬುವುದರ ಬಗ್ಗೆ ದೃಢೀಕರಣ ಪತ್ರ,
*ವ್ಯಾಸಂಗ ಪ್ರಮಾಣ ಪತ್ರದ ಪ್ರತಿ.
*ಎಸ್.ಎಸ್.ಎಲ್.ಸಿ/ಪಿ.ಯು.ಸಿ/ಬಿ.ಎ/ಬಿ.ಕಾಂ/ಬಿ.ಇ/ಎA.ಬಿ.ಬಿ.ಎಸ್/ಬಿ.ಎನ್.ಸಿ/
ಬಿ.ಸಿ.ಎ. ವ್ಯಾಸಾಂಗ ಮಾಡುತ್ತಿರುವ ಬಗ್ಗೆ ಶಾಲಾ/ಕಾಲೇಜುಗಳ ಮುಖ್ಯಸ್ಥರಿಂದ ಪಡೆದ ದೃಢೀಕರಣ ಪತ್ರ ಹಾಗೂ ಇನ್ನಿತರೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ನಗರಸಭೆ ಕಾರ್ಯಾಲಯ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

