HomeLatest NewsBIG NEWS : ಗಲ್ಫ್  ರಾಷ್ಟ್ರಗಳಲ್ಲಿ ಯುದ್ಧದ ಎಫೆಕ್ಟ್ :  'ಡ್ರೈ ಫ್ರೂಟ್ಸ್' ದರದಲ್ಲಿ ಭಾರಿ...

BIG NEWS : ಗಲ್ಫ್  ರಾಷ್ಟ್ರಗಳಲ್ಲಿ ಯುದ್ಧದ ಎಫೆಕ್ಟ್ :  ‘ಡ್ರೈ ಫ್ರೂಟ್ಸ್’ ದರದಲ್ಲಿ ಭಾರಿ ಏರಿಕೆ.!

ಗಲ್ಫ್ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯು ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಯುದ್ಧದ ಹಿನ್ನೆಲೆಯಲ್ಲಿ ಇರಾನ್ನ ಪ್ರಮುಖ ಬಂದರುಗಳು ಮುಚ್ಚಲ್ಪಟ್ಟಿರುವುದರಿಂದ ಭಾರತಕ್ಕೆ ಬರಬೇಕಿದ್ದ ಒಣ ಹಣ್ಣುಗಳ (Dry Fruits) ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮ ಡ್ರೈ ಫ್ರೂಟ್ಸ್’ ದರದಲ್ಲಿ ಭಾರಿ ಏರಿಕೆಯಾಗಿದೆ.

ಹೌದು. ಗಲ್ಫ್ ರಾಷ್ಟ್ರಗಳಲ್ಲಿನ ಯುದ್ಧದ ಉದ್ವಿಗ್ನತೆ ಇದೀಗ ಸಾಮಾನ್ಯ ಜನರ ಅಡುಗೆ ಮನೆಗೂ ತಟ್ಟಿದೆ. ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಬರಬೇಕಿದ್ದ ಒಣ ಹಣ್ಣುಗಳ (Dry Fruits) ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆಗಳು ದಿಢೀರ್ ಏರಿಕೆಯಾಗಿವೆ. ರಂಜಾನ್ ಮಾಸದ ಜೊತೆಗೆ ಯುಗಾದಿ ಮತ್ತು ಶ್ರೀರಾಮನವಮಿ ಹಬ್ಬಗಳು ಹತ್ತಿರ ಬರುತ್ತಿರುವ ಬೆನ್ನಲ್ಲೇ ಪಿಸ್ತಾ, ಅಂಜೂರ ಮತ್ತು ಖರ್ಜೂರದ ಬೆಲೆಗಳು ಕೆ.ಜಿಗೆ 200 ರಿಂದ 300 ರೂಪಾಯಿಗಳಷ್ಟು ದುಬಾರಿಯಾಗಿದ್ದು, ಗ್ರಾಹಕರು ಒಣ ಹಣ್ಣುಗಳ ಖರೀದಿಗೆ ಹಿಂದೇಟು ಹಾಕುವಂತಾಗಿದೆ.

ಬೆಲೆ ಏರಿಕೆಯ ವಿವರ: ವಿಶೇಷವಾಗಿ ಪಿಸ್ತಾ, ಅಂಜೂರ ಮತ್ತು ಖರ್ಜೂರದ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂದಿನ ವಾರಗಳಲ್ಲಿ ಈ ಬೆಲೆಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರ್ತಕರು ತಿಳಿಸಿದ್ದಾರೆ.
• ಹಿಂದೆ ಕೆ.ಜಿ.ಗೆ 2,000 ರೂ. ಇದ್ದ ಪಿಸ್ತಾ ದರ ಈಗ 2,200 ರೂ. ತಲುಪಿದೆ.
• ಸಾಲಟೆಡ್ ಪಿಸ್ತಾ ಬೆಲೆ ಕೆ.ಜಿ.ಗೆ 1,100 ರೂ.ನಿಂದ 1,300 ರೂ. ಗೆ ಏರಿಕೆಯಾಗಿದೆ.
• ಬಹುತೇಕ ಎಲ್ಲಾ ರೀತಿಯ ಒಣ ಹಣ್ಣುಗಳ ಬೆಲೆಯನ್ನು ವ್ಯಾಪಾರಿಗಳು ಈಗಾಗಲೇ ಹೆಚ್ಚಿಸಿದ್ದಾರೆ.

ಸರಬರಾಜು ವ್ಯತ್ಯಯಕ್ಕೆ ಕಾರಣಗಳು: ಇರಾನ್ ಬಂದರು ಅಬ್ಬಾಸ್ ಮತ್ತು ಚಾಬಹಾರ್ ಬಂದರುಗಳು ಮುಚ್ಚಿರುವುದರಿಂದ ಸಮುದ್ರ ಮಾರ್ಗದ ಮೂಲಕ ನಡೆಯಬೇಕಿದ್ದ ಆಮದು ಪ್ರಕ್ರಿಯೆ ಸಂಪೂರ್ಣ ನಿಂತುಹೋಗಿದೆ. ಮತ್ತೊಂದೆಡೆ, ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಅಫ್ಘಾನಿಸ್ತಾನದಿಂದ ಬರಬೇಕಿದ್ದ ಸರಕುಗಳ ಮೇಲೆಯೂ ಗಂಭೀರ ಪರಿಣಾಮ ಬೀರಿದೆ.
ಹಬ್ಬಗಳ ಸೀಸನ್ – ಹೆಚ್ಚಿದ ಬೇಡಿಕೆ: ಪ್ರಸ್ತುತ ರಂಜಾನ್ ಮಾಸ ನಡೆಯುತ್ತಿರುವುದು ಮತ್ತು ಯುಗಾದಿ, ಶ್ರೀರಾಮನವಮಿ ಹಬ್ಬಗಳು ಹತ್ತಿರ ಬರುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಡ್ರೈ ಫ್ರೂಟ್ಸ್ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಪೂರೈಕೆ ಕಡಿಮೆಯಿರುವುದರಿಂದ ಸಗಟು ವ್ಯಾಪಾರಿಗಳು ಬೆಲೆ ಏರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಬೆಲೆಗಳು ಹೊಸ ದಾಖಲೆ ಬರೆಯಬಹುದು ಎಂಬ ಆತಂಕ ವ್ಯಾಪಾರಿಗಳಲ್ಲಿದೆ.

ಮಾಂಸಾಹಾರಿ ಅಡುಗೆಗಳು ಮತ್ತು ಜ್ಯೂಸ್ ಸೆಂಟರ್ಗಳಲ್ಲಿ ಇವುಗಳ ಬಳಕೆ ಹೆಚ್ಚಿರುವುದರಿಂದ, ಬೆಲೆ ಏರಿಕೆಯ ಹೊಡೆತಕ್ಕೆ ಸಾಮಾನ್ಯ ಜನರು ಡ್ರೈ ಫ್ರೂಟ್ಸ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular