HomeKarnatakaGOOD NEWS : ಅನುದಾನಿತ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ರಾಜ್ಯ ಸರ್ಕಾರ ಮಹತ್ವದ...

GOOD NEWS : ಅನುದಾನಿತ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ.!

ಬೆಂಗಳೂರು : ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ದಿನಾಂಕ:07-08-2024 ರಲ್ಲಿ ರಾಜ್ಯದ ಅನುದಾನಿತ ಪ್ರೌಢಶಾಲೆಗಳಲ್ಲಿ ದಿನಾಂಕ:01.01.2016 ರಿಂದ 31.12.2020ರವರೆಗೆ ನಿಧನ, ನಿವೃತ್ತಿ, ರಾಜೀನಾಮೆ ಹಾಗೂ ಇತರೆ ಕಾರಣಗಳಿಂದ ಖಾಲಿಯಾದ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿಸಿ ಆದೇಶಿಸಿದೆ. ಸದರಿ ಆದೇಶದಲ್ಲಿ ಅನುದಾನಿತ ಶಾಲೆಗಳು ಆನ್ಲೈನ್ ಮೂಲಕ ವಿವರಗಳು/ದಾಖಲೆಗಳನ್ನು ಸಲ್ಲಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸುವುದು ಹಾಗೂ ಈ ತಂತ್ರಾಂಶದ ಮೂಲಕ ವ್ಯವಹರಿಸುವುದು ಎಂದು ಸೂಚಿಸಲಾಗಿರುತ್ತದೆ.

ಸರ್ಕಾರದ ಆದೇಶ ದಿನಾಂಕ:07-08-2024 ಹಾಗೂ ಸರ್ಕಾರದ ಪ್ರದಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರ ಟಿಪ್ಪಣಿ ದಿನಾಂಕ:24-10-2024ರಂತೆ ಅನುದಾನಿತ ಶಿಕ್ಷಕರ ಖಾಲಿಯಾದ ಬೋದಕ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ತಂತ್ರಾಂಶ ಅಭಿವೃದ್ಧಿ ಕಾರ್ಯ ಪುಗತಿಯಲ್ಲಿರುತ್ತದೆ.
ತಂತ್ರಾಂಶವು ಕೆಳಕಂಡ ಆರು ಹಂತಗಳನ್ನು ಒಳಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1. ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್ನಲ್ಲಿ ಅನುದಾನಿತ ಶಾಲೆಗಳ ಮಂಜೂರಾದ/ಕಾರ್ಯನಿರತ ಮತ್ತು ಅರ್ಹ ಖಾಲಿ ಹುದ್ದೆಗಳ ಮಾಹಿತಿ ಇಂದೀಕರಿಸುವುದು.

2. ಆಡಳಿತ ಮಂಡಳಿಯಿಂದ ಖಾಲಿ ಹುದ್ದೆ ಭರ್ತಿಗೆ ಅನುಮತಿ ಕೋರಿ ಸಂಬಂಧಿಸಿದ ಆಯುಕ್ತಾಲಯಗಳಿಗೆ ಪ್ರಸ್ತಾವನೆ ಸಲ್ಲಿಕೆ.

3. ಆಯಾ ಆಯುಕ್ತಾಲಯಗಳಲ್ಲಿ ಸಮಿತಿಗಳನ್ನು ರಚಿಸಿ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶಿಫಾರಸ್ಸು ಮಾಡುವುದು. ಶಿಫಾರಸ್ಸು ಆಧರಿಸಿ ಖಾಲಿ ಹುದ್ದೆ ಭರ್ತಿಗೆ ಅನುಮತಿ ನೀಡುವುದು

4 ಆಡಳಿತ ಮಂಡಳಿಗಳು ಅನುಮತಿಸಿದ ಹುದ್ದೆಗಳಿಗೆ ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ಕೈಗೊಂಡು ಸಂಬಂಧಿಸಿದ ಉಪನಿರ್ದೇಶಕರಿಗೆ ನೇಮಕಾತಿ ಅನುಮೋದನೆಗೆ ಆನ್ಲೈನ್ನಲ್ಲಿ ಪ್ರಸ್ತಾವನೆ ಸಲ್ಲಿಕೆ

ಉಪನಿರ್ದೇಶಕರಿಂದ ಪರಿಶೀಲಿಸಿ ಸಂಬಂದಿಸಿದ ಆಯುಕ್ತಾಲಯಗಳಿಗೆ ಆನ್ಲೈನ್ನಲ್ಲಿ ಪ್ರಸ್ತಾವನೆಗಳ ಸಲ್ಲಿಕೆ

6. ಸಂಬಂದಿಸಿದ ಆಯುಕ್ತಾಲಯಗಳಿಂದ ಸರ್ಕಾರಕ್ಕೆ ಆನ್ಲೈನ್ನಲ್ಲಿ ಅನುಮೋದನೆಗೆ ಸಲ್ಲಿಕೆ

ಪ್ರಸ್ತುತ ಮೇಲೆ ತಿಳಿಸಿರುವ ಆರು ಹಂತಗಳಲ್ಲಿ ಮೊದಲ ಎರಡು ಹಂತಗಳ ತಂತ್ರಾಂಶ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದ್ದು ಉಳಿದ ಹಂತಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿರುತ್ತದೆ. ಸರ್ಕಾರದ ಸುತ್ತೋಲೆ ಸಂಖ್ಯೆ: ಸಿ.ಅ.ಸು.ಇ 388 ಸೆನೆನಿ.2024 ದಿನಾಂಕ:25-11-2024 ರಂದು ಎಲ್ಲಾ ನೇಮಕಾತಿ ಪ್ರಕ್ರಿಯೆಗಳಿಗೆ ಹೊಸದಾಗಿ ಅಧಿಸೂಚನೆ ಹೊರಡಿಸದಿರಲು ಆದೇಶಿಸಲಾಗಿದೆ. ಸದರಿ ಆದೇಶದಂತೆ ಮೊದಲ ಹಂತದ ತಂತ್ರಾಂಶ (BEO Login) ನ್ನು ಚಾಲ್ತಿಗೊಳಿಸುವುದನ್ನು ತಡೆಹಿಡಿದು, ಈ ಕುರಿತು ಸರ್ಕಾರಕ್ಕೆ ಮಾರ್ಗದರ್ಶನ ಕೋರಲಾಗಿದೆ.
ಆದರೆ ವಿವಿಧ ಶಾಲಾ ಆಡಳಿತ ಮಂಡಳಿಗಳಿಂದ ಹಾಗೂ ಜನ ಪ್ರತಿನಿಧಿಗಳಿಂದ ಸರ್ಕಾರವು ಆದೇಶ ಸಂಖ್ಯೆ: ಇಪಿ:396 ಎಸ್.ಇ.ಎಸ್ 2021 ದಿನಾಂಕ:07-08-2024ರಲ್ಲಿ ಆದೇಶ ಮಾಡಿದ್ದರೂ ಸದರಿ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ ಎಂದು ತಿಳಿಸುತ್ತಾ ಪ್ರಕ್ರಿಯೆ ಪ್ರಾರಂಭಿಸಲು ಕೋರಿ ಮನವಿಗಳು ಸ್ವೀಕೃತವಾಗುತ್ತಲಿವೆ.

ಈ ಹಿನ್ನೆಲೆಯಲ್ಲಿ ತಂತ್ರಾಂಶದ ಮೊದಲ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್ನಲ್ಲಿ ಅನುದಾನಿತ ಶಾಲೆಗಳ ಮಂಜೂರಾದ/ಕಾರ್ಯನಿರತ ಮತ್ತು ಅರ್ಹ ಖಾಲಿ ಹುದ್ದೆಗಳ ಮಾಹಿತಿ ಇಂದೀಕರಿಸುವ ಪ್ರಕ್ರಿಯೆ ಒಳಗೊಂಡಿದ್ದು ಈ ಹಂತದಲ್ಲಿ ಯಾವುದೇ ರೋಸ್ಟರ್ ಬಿಂದು ನಿಗಧಿಪಡಿಸುವ ಪ್ರಕ್ರಿಯೆ ಇರುವುದಿಲ್ಲ. ಪ್ರಯುಕ್ತ ಮೊದಲ ಹಂತದ ತಂತ್ರಾಂಶ ಬಿಡುಗಡಗೆ ಅನುಮತಿ ನೀಡಲು ಕೋರಿ ಉಲ್ಲೇಖ-3ರಲ್ಲಿ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆರವರನ್ನು ಕೋರಲಾಗಿದೆ. ಈ ಹಂತದಲ್ಲಿ ಯಾವುದೇ ರೋಸ್ಟರ್ ಬಿಂದು ನಿಗಧಿಪಡಿಸುವ ಪ್ರಕ್ರಿಯೆ ಇರುವುದಿಲ್ಲ. ಪ್ರಯುಕ್ತ ಮೊದಲ ಹಂತದ ತಂತ್ರಾಂಶ ಬಿಡುಗಡಗೆ ಅನುಮತಿ ನೀಡಲು ಕೋರಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular