ಬೆಂಗಳೂರು : ಬೋಧಕೇತರ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
ಸರ್ಕಾರದ ಉಲ್ಲೇಖಿತ 9 ರ ಆದೇಶದಲ್ಲಿ ವರ್ಗಾವಣೆಯ ಬಗ್ಗೆ ಮಾರ್ಗಸೂಚಿಗಳನ್ವಯ ಉಲ್ಲೇಖ-10ರ ಈ ಕಛೇರಿ ಅಧಿಸೂಚನೆಯಂತೆ ವರ್ಗಾವಣೆ ಹಮ್ಮಿಕೊಂಡು ಮೊದಲನೇ ಸುತ್ತಿನ ವರ್ಗಾವಣೆಯನ್ನು ಜಾರಿಗೊಳಿಸಲಾಗಿದೆ.
ಆದರೆ ಉಲ್ಲೇಖ-11ರಲ್ಲಿ ಸದರಿ ಆದೇಶದಲ್ಲಿ ನಮೂದಿಸಿರುವ ಷರತ್ತುಗಳೊಂದಿಗೆ ಪ್ರಸ್ತುತ 2025-26 ನೇ ಸಾಲಿನಲ್ಲಿ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಸಂಬಂಧಿಸಿದ ವೃಂದದ ಕಾರ್ಯನಿರತ ವೃಂದ ಬಲದ (working strength) ಶೇಕಡ 6 ಕ್ಕೆ ಸೀಮಿತಗೊಳಿಸಿ ದಿನಾಂಕ: 30-06-2025 ರೊಳಗೆ ಪೂರ್ಣಗೊಳಿಸಲು ದಿನಾಂಕ ವಿಸ್ತರಿಸಿ ಆದೇಶಿಸಲಾಗಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ವೇಳಾಪಟ್ಟಿಯನ್ನು ಕೆಳಕಂಡ ಷರತ್ತುಗಳೊಂದಿಗೆ ಹೊರಡಿಸಿದೆ.
- ಉಲ್ಲೇಖ-09 ಮತ್ತು 10ರ ಎಲ್ಲಾ ಷರತ್ತುಗಳು ಯಥಾ ವತ್ತಾಗಿ ಮುಂದುವರೆಯುತ್ತವೆ.
- ಈಗಾಗಲೇ ಅರ್ಜಿ ಸಲ್ಲಿಸಿ ವರ್ಗಾವಣೆ ಪಡೆದಿರುವ ಅಥವಾ ಅರ್ಜಿ ಸಲ್ಲಿಸಿ ಕೌನ್ಸಿಲಿಂಗ್ ನಲ್ಲಿ ಗೈರು ಹಾಜರಿ/ತಿರಸ್ಕರಿಸಿದ ನೌಕರರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಂತಹವರನ್ನು ಹೊರತುಪಡಿಸಿ ಉಳಿದ ಆಸಕ್ತರು ನಿಯಮಾನುಸಾರ ಅರ್ಜಿ ಸಲ್ಲಿಸಬಹುದಾಗಿದೆ.
- ಒಂದೇ ಸ್ಥಳದಲ್ಲಿ ಧೀರ್ಘಾವಧಿ ಸೇವೆ ಸಲ್ಲಿಸಿರುವ ಪ್ರಕರಣಗಳ ಬಗ್ಗೆ ಇಇಡಿಎಸ್ನಿಂದ ಪಡೆದ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದ್ದು ಕಛೇರಿ ಮುಖ್ಯಸ್ಥರು ಇಇಡಿಎಸ್ನ ಸೇವಾ ವಿವರದ ಮಾಹಿತಿಯನ್ನು ಪರಿಶೀಲನೆ ಮಾಡುವುದು ಹಾಗೂ ಆದ್ಯತೆ /ವಿನಾಯಿತಿ ಗುರುತಿಸುವುದು ಈಗಾಗಲೇ ಸರ್ಕಾರದಿಂದ/ಇಲಾಖೆಯಿಂದ ವರ್ಗಾವಣಾ ಆದೇಶ ಆಗಿರುವ ಪ್ರಕರಣಗಳನ್ನು ಮತ್ತು ಆಯಾ ಹುದ್ದೆಗಳನ್ನು ಕಡ್ಡಾಯವಾಗಿ ಗುರುತಿಸತಕ್ಕದ್ದು.
- ಶೇಕಡ. 4ರ ಮಿತಿಯೊಳಗೆ ಕೋರಿಕೆ ವರ್ಗಾವಣೆಗಳಿಗೆ ಕೌನ್ಸಿಲಿಂಗನ್ನು ಆನ್ ಲೈನ್ನಲ್ಲಿ ಮತ್ತು ಶೇಕಡ 2 ರ ಮಿತಿಯೊಳಗೆ ಸಾರ್ವಜನಿಕ ಹಿತಾಸಕ್ತಿ ವರ್ಗಾವಣೆಗಳನ್ನು ನಡೆಸಲಾಗುವುದು.
ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿ:
ಈ ಮೇಲ್ಕಂಡಂತೆ ಸಕ್ಷಮ ಪ್ರಾಧಿಕಾರ ತಮ್ಮ ವ್ಯಾಪ್ತಿಗೆ ಬರುವಂತಹ ನಿಗದಿಪಡಿಸಿರುವ ಸಿಬ್ಬಂದಿ ವರ್ಗದವರ ವರ್ಗಾವಣೆಯ ಬಗ್ಗೆ ಮಾರ್ಗಸೂಚಿಯನ್ವಯ ಈ ಕೆಳಕಂಡ ಪ್ರಕ್ರಿಯೆಯನ್ನು ನಡೆಸಲು ತಿಳಿಸಿದೆ. ವೇಳಾ ಪಟ್ಟಿಯಲ್ಲಿ ಬದಲಾವಣೆ ಇದ್ದಲ್ಲಿ ವೆಬ್ ಸೈಟ್ ಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.







You Might Also Like
TAGGED:ಸಾರ್ವತ್ರಿಕ ವರ್ಗಾವಣೆ