HomeAstroನಿಮ್ಮ ಪ್ರೀತಿ ಬಗ್ಗೆ ಹೇಳುತ್ತೆ ಶರೀರದ ಈ ಐದು ಭಾಗದಲ್ಲಿರುವ ಮಚ್ಚೆ

ನಿಮ್ಮ ಪ್ರೀತಿ ಬಗ್ಗೆ ಹೇಳುತ್ತೆ ಶರೀರದ ಈ ಐದು ಭಾಗದಲ್ಲಿರುವ ಮಚ್ಚೆ

ದೇಹದ ಅನೇಕ ಭಾಗಗಳಲ್ಲಿ ಮಚ್ಚೆಗಳಿರುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕ, ಕೈಯನ್ನು ನೋಡಿ ಭವಿಷ್ಯ ಹೇಳಿದಂತೆ, ಮಚ್ಚೆಯಿಂದಲೂ ನಮ್ಮ ಭವಿಷ್ಯದ ಬಗ್ಗೆ ಹೇಳಬಹುದು. ದೇಹದಲ್ಲಿರುವ ಮಚ್ಚೆಗಳು ಮುಂದಿನ ಜೀವನ, ಸ್ವಭಾವದ ಬಗ್ಗೆ ಹೇಳುತ್ತವೆ.

ಬಲ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅದು ಶುಭ.  ಬಲ ಕೆನ್ನೆಯ ಮೇಲೆ ಮಚ್ಚೆ ಇರುವವರ ವೈವಾಹಿಕ ಜೀವನ ಪ್ರೀತಿ ತುಂಬಿರುತ್ತದೆ. ಅದೇ ಎಡ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅವರ ವೈವಾಹಿಕ ಜೀವನದಲ್ಲಿ ಪ್ರೀತಿ ಇರುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವ್ಯಕ್ತಿಯ ಬಲ ಕಣ್ಣಿನಲ್ಲಿ ಮಚ್ಚೆ ಇದ್ದರೆ ಸಂಗಾತಿಯಿಂದ ಬಹಳ ಪ್ರೀತಿ ಸಿಗುತ್ತದೆ. ಎಡ ಕಣ್ಣಿನ ಮೇಲೆ ಮಚ್ಚೆ ಇದ್ದರೆ ಗಂಡ ಹೆಂಡತಿಯ ಮಧ್ಯೆ ಮಾತು ಮಾತಿಗೂ ಜಗಳ ನಡೆಯುತ್ತದೆ.

ಕೈಯಲ್ಲಿ ಮಚ್ಚೆ ಇದ್ದರೆ ಅದು ಒಳಿತಿನ ಸಂಕೇತ. ಯಾರ ಬಲಗೈ ಮೇಲೆ ಮಚ್ಚೆ ಇದೆಯೋ ಅವರಿಗೆ ನಿಷ್ಠಾವಂತ ಸಂಗಾತಿ ದೊರಕುತ್ತಾಳೆ. ಎಡಗೈ ಮೇಲೆ ಮಚ್ಚೆ ಇದ್ದರೆ ಅದು ಮುಂದೆ ಜೀವನದಲ್ಲಿ ಬರುವ ಕಷ್ಟ ನೀಡುವ ಸಂಕೇತವಾಗಿದೆ.

ಗಲ್ಲದ ಮೇಲೆ ಇರುವ ಮಚ್ಚೆ ಅಶುಭದ ಸಂಕೇತವಾಗಿದೆ. ಯಾರ ಗಲ್ಲದ ಮೇಲೆ ಮಚ್ಚೆ ಇದೆಯೋ ಅವರಿಬ್ಬರ ನಡುವೆ ಪ್ರೀತಿಯೂ ಕಡಿಮೆ ಇರುತ್ತದೆ. ಅವರಿಗೆ ಸಂಗಾತಿಯಿಂದ ಮೋಸವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಹಣೆಯ ಮೇಲೆ ಮಚ್ಚೆ ಇದ್ದರೆ ಅದು ಶುಭವಲ್ಲ. ಯಾರ ಹಣೆಯ ಮೇಲೆ ಮಚ್ಚೆ ಇರುತ್ತದೆಯೋ ಅವರಿಗೆ ಮದುವೆಯ ನಂತರ ಬಹಳ ಕಷ್ಟ ಎದುರಿಸಬೇಕಾಗುತ್ತದೆ. ಸಂಗಾತಿ ಎಷ್ಟೇ ನಿಷ್ಠಾವಂತನಾಗಿದ್ದರೂ ಪ್ರೀತಿಯ ಕೊರತೆ ಇದ್ದೇ ಇರುತ್ತೆ.

For Latest News Updates, Join Our Whatsapp Community🚩
RELATED ARTICLES

Most Popular