HomeIndiaBREAKING NEWS: ಜಾರ್ಖಂಡ್ ನಲ್ಲಿ ಇಡಿ ದಾಳಿ; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ 20 ಕೋಟಿಗೂ...

BREAKING NEWS: ಜಾರ್ಖಂಡ್ ನಲ್ಲಿ ಇಡಿ ದಾಳಿ; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ 20 ಕೋಟಿಗೂ ಅಧಿಕ ಹಣ ಜಪ್ತಿ

ರಾಂಚಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ಜಾರ್ಖಂಡ್ ನಲ್ಲಿ ಇಡಿ ಅಧಿಕಾರಿಗಳು ಬೃಹತ್ ದಾಳಿ ನಡೆಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಬರೋಬ್ಬರಿ 20 ಕೋಟಿ ಅಧಿಕ ಹಣ ಪತ್ತೆಯಾಗಿದೆ.

ಸಚಿವ ಆಲಮ್ಗೀರ್ ಆಲಂ ಪಿಎ ಸಂಜೀವ್ ಲಾಲ್ ನಿವಾಸ, ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಬ್ಯಾಗ್ ಗಳಲ್ಲಿ ಕಂತೆ ಕಂತೆ ಹಣ ಪಎಯಾಗಿದೆ. ಬರೋಬ್ಬರಿ 20 ಕೋಟಿಗೂ ಅಧಿಕ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಸಂಜೀವ್ ಲಾಲ್ ಮನೆ ಸೇರಿದಂತೆ ಒಟ್ಟು 6 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚುನಾವಣೆ ವೇಳೆ ಮತದಾರರಿಗೆ ಹಂಚಲೆಂದು ಮನೆಯಲ್ಲಿ ಹಣ ಸಂಗ್ರಹಿಸಿ ಇಡಲಾಗಿತ್ತು ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular