HomeIndiaಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಲಖನೌ ನಿವಾಸದ ಮೇಲೂ ಇಡಿ ದಾಳಿ: ಉತ್ತರಪ್ರದೇಶದದಿಂದಲೂ...

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಲಖನೌ ನಿವಾಸದ ಮೇಲೂ ಇಡಿ ದಾಳಿ: ಉತ್ತರಪ್ರದೇಶದದಿಂದಲೂ ನಾಪತ್ತೆಯಾಗಿರುವ ಅಧಿಕಾರಿ ಹೋಗಿದ್ದು ಎಲ್ಲಿಗೆ?

ಬೆಂಗಳೂರು: ಕೆಪಿಎಸ್‍ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪರೀಕ್ಷಾ ನಿಯಂತ್ರಕ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಲಖನೌ ನಿವಾಸದ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ಬಳಿಕ ಇಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ ಅವರ ಲಖನೌ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ. ಆದರೆ ಅಧಿಕಾರಿ ಅಲ್ಲಿಂದಲೂ ನಾಪತ್ತೆಯಾಗಿದ್ದಾರೆ. ಇಡಿ‌ ದಾಳಿ ಸುಳಿವಿನ ಮೇಲೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಖನೌ ನಿವಾಸದಲ್ಲಿ ಜ್ಞಾನೇಂದ್ರ ಕುಮಾರ್ ಅವರ ವೃದ್ಧ ತಂದೆ ಮತ್ತು ಕೇರ್​ಟೇಕರ್ ಹೊರತುಪಡಿಸಿ ಬೇರೆ ಯಾರೂ ಮನೆಯಲ್ಲಿರಲಿಲ್ಲ. ಜ್ಞಾನೇಂದ್ರ ಕುಮಾರ್ ಕುಟುಂಬ ಸದಸ್ಯರು ಕೂಡ ಸಂಪರ್ಕಕ್ಕೆ ಸಿಗ್ತಿಲ್ಲ ಎನ್ನಲಾಗಿದೆ. ಈ ನಡುವೆ ಪಶು ವೈದ್ಯರ ನೇಮಕಾತಿ ಹಗರಣದ ತನಿಖೆಯನ್ನು ಇಡಿ ಮುಂದುವರಿಸಿದೆ.

2016ನೇ ಬ್ಯಾಚ್​​ನ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, 10 ವರ್ಷಗಳಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಮಾರ್ಚ್​​ವರೆಗೂ KPSCಯಲ್ಲಿ ಎಕ್ಸಾಂ ಕಂಟ್ರೋಲರ್​ ಆಗಿದ್ದರು. ಅಲ್ಲದೇ ಪಶುವೈದ್ಯಾಧಿಕಾರಿ ಮತ್ತು KAS ಪರೀಕ್ಷಾ ಮೇಲ್ವಿಚಾರಕರಾಗಿದ್ದರು.

ಕೆಪಿಎಸ್ ಸಿ ಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಕೆಲಸ ಮಾಡಿದ್ದ ಜ್ಞಾನೇಂದ್ರ ಕುಮಾರ್​​ ಇಡಿ‌ ದಾಳಿ ಸುಳಿವಿನ ಮೇಲೆ ಪರಾರಿಯಾದ್ರಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಪರೀಕ್ಷಾ ಅಕ್ರಮ ಸಂಬಂಧ ಶಿವಶಂಕರಪ್ಪ ಸಾಹುಕಾರ್ ನಿವಾಸ ಸೇರಿ 21 ಕಡೆ ಇಡಿ ದಾಳಿ ನಡೆಸಿತ್ತು. ಈ ಹಿನ್ನೆಲೆ ತನ್ನ ಮೇಲೂ ದಾಳಿ ಆಗಬಹುದು ಎಂದು ಜ್ಞಾನೇಂದ್ರ ಕುಮಾರ್ಮೊದಲೇ ಲೆಕ್ಕಹಾಕಿದ್ದರು. ಹೀಗಾಗಿಯೇ ತರಾತುರಿಯಲ್ಲಿ ಕಳೆದ ವಾರ ದೆಹಲಿಗೆ ತೆರಳಿದ್ದರು. ನಂತರ 15 ದಿನಗಳಕಾಲ ರಜೆ ಮೇಲೆ ಹೋಗಿರುವುದಾಗಿ ಸರ್ಕಾರಕ್ಕೆ ಸ್ಪಷ್ಟನೆ ನೀಡಿದ್ದರು ಎನ್ನಲಾಗಿದೆ. 15 ದಿನಗಳ ಕಾಲ ರಜೆ ಹಾಕಿ ಅಧಿಕಾರಿ ಹೋಗಿದ್ದಾದರೂ ಎಲ್ಲಿ? ಎಂಬ ಪ್ರಶ್ನೆ ಮೂಡಿದೆ. ಮತ್ತೊಂದೆಡೆ ಇಡಿ ಅಧಿಕಾರಿಗಳು ಅವರ ನಿವಾಸಕ್ಕೆ ನೋಟಿಸ್ ಅಂಟಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular