ಮುಟ್ಟಿನ ನೋವಿನಿಂದ ಪಾರಾಗಲು ಸೇವಿಸಿ ಈ ‘ಆಹಾರ’

ಹೆಣ್ಣುಮಕ್ಕಳು ಪ್ರತಿ ತಿಂಗಳೂ ಋತುಚಕ್ರದ ನೋವನ್ನ ಅನುಭವಿಸೋದು ಸರ್ವೇ ಸಾಮಾನ್ಯ .ಈ ಸಮಯದಲ್ಲಿ ಸ್ತ್ರೀಯರು ಹೊಟ್ಟೆ ನೋವು, ತಲೆನೋವು, ಸೊಂಟ ನೋವು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನ ಅನುಭವಿಸ್ತಾರೆ. ಈ ನೋವಿನಿಂದ ಪಾರಾಗೋಕೆ ಅನೇಕರು ನೋವು ನಿವಾರಕ ಮಾತ್ರೆಗಳ ಮೊರೆ ಹೋಗ್ತಾರೆ. ಆದರೆ ಈ ಸಮಸ್ಯೆಯನ್ನ ಯಾವುದೇ ಸೈಡ್​ ಎಫೆಕ್ಟ್​ಗಳಿಲ್ಲದೇ ಮನೆ ಮದ್ದಿನ ಮೂಲಕವೇ ವಾಸಿ ಮಾಡಬಹುದಾಗಿದೆ.

ಹೆಚ್ಚೆಚ್ಚು ನೀರನ್ನ ಸೇವಿಸೋದ್ರಿಂದ ನಿಮ್ಮ ದೇಹ ಹೈಡ್ರೇಟ್​ ಆಗಿರಲಿದೆ. ಹೊಟ್ಟೆಯಲ್ಲಿ ಉಬ್ಬರದಂತಹ ಸಮಸ್ಯೆಯಿಂದ ಪಾರಾಗೋಕೆ ನೀವು ಆದಷ್ಟು ನೀರನ್ನ ಕುಡಿಯಿರಿ. ಟೀ ಹಾಗೂ ಕಾಫಿ ಸೇವನೆ ಕೂಡ ಈ ಸಮಯದಲ್ಲಿ ಒಳ್ಳೆಯದೆ.

ಮುಟ್ಟಿನ ಸಂದರ್ಭದಲ್ಲಿ ರಕ್ತಸ್ರಾವವಾಗೋದ್ರಿಂದ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುತ್ತೆ. ಇದರಿಂದ ನಿಮಗೆ ಸುಸ್ತಾಗಬಹುದು, ತಲೆ ಸುತ್ತಿ ಬೀಳಲೂಬಹುದು. ಹೀಗಾಗಿ ಆದಷ್ಟು ಬಾಳೆಹಣ್ಣು, ಹಸಿರು ತರಕಾರಿಗಳನ್ನ ಸೇವನೆ ಮಾಡಿ.

ನಿಮಗೆ ಡಾರ್ಕ್​ ಚಾಕಲೇಟ್​ನ ರುಚಿ ಸೇರದೇ ಇರಬಹುದು. ಆದರೆ ಡಾರ್ಕ್​ ಚಾಕಲೇಟ್​​ನಲ್ಲಿರುವ ಮೆಗ್ನಷಿಯಂ, ಪೊಟ್ಯಾಷಿಯಂ ಹಾಗೂ ಕಬ್ಬಿಣಾಂಶದಿಂದಾಗಿ ನಿಮ್ಮ ದೇಹದ ಮೂಳೆಗಳಿಗೆ ಶಕ್ತಿ ಸಿಗಲಿದೆ. ಅಲ್ಲದೇ ಮುಟ್ಟಿನ ಸಂದರ್ಭದ ನೋವನ್ನೂ ಇದು ಕಡಿಮೆ ಮಾಡಲಿದೆ. ಇದರಲ್ಲಿರುವ ಸೆರೊಟೊನಿನ್​ ಎಂಬ ರಾಸಾಯನಿಕ ನಿಮ್ಮ ಮೂಡ್​ನ್ನು ಸರಿಯಾಗಿಡಲು ಸಹಕಾರಿ.

ಮುಟ್ಟಿನ ಸಮಸ್ಯೆಯಲ್ಲಿ ಉಂಟಾಗುವ ನೋವನ್ನ ಕಡಿಮೆ ಮಾಡಲು ದಾಲ್ಚಿನ್ನಿ ಕೂಡ ಸಹಕಾರಿ. ಹೀಗಾಗಿ ಈ ದಿನಗಳಲ್ಲಿ ನಿಮ್ಮ ನಿತ್ಯದ ಆಹಾರದಲ್ಲಿ ದಾಲ್ಚಿಯನ್ನ ಸೇರಿಸಿಕೊಳ್ಳಿ. ಇಲ್ಲವಾದಲ್ಲಿ ದಾಲ್ಚಿನ್ನಿ ಕುದಿಸಿದ ನೀರನ್ನ ಬೆಚ್ಚನೆಯ ನೀರಿನಲ್ಲಿ ಸೇರಿಸಿ ಕುಡಿಯೋದ್ರಿಂದ ಹೆಚ್ಚಿನ ಲಾಭ ಸಿಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read