HomeBeautyನಿಮ್ಮ ದೇಹದ ಕೊಬ್ಬು ಕರಗಿಸಲು ತಿಂಗಳಿನಲ್ಲಿ ಒಂದು ವಾರ ಸೇವಿಸಿ ಈ ಆಹಾರ

ನಿಮ್ಮ ದೇಹದ ಕೊಬ್ಬು ಕರಗಿಸಲು ತಿಂಗಳಿನಲ್ಲಿ ಒಂದು ವಾರ ಸೇವಿಸಿ ಈ ಆಹಾರ

ಇತ್ತೀಚಿನ ದಿನಗಳಲ್ಲಿ ಜನರು ಬ್ಯುಸಿ ಸಮಯದಿಂದ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದರಿಂದ ಅವರು ಬೊಜ್ಜಿನ ಸಮಸ್ಯೆಗೂ ಬಲಿಯಾಗುತ್ತಿದ್ದಾರೆ. ಹಾಗಾಗಿ ಈ ಬೊಜ್ಜನ್ನು ಕರಗಿಸಿಕೊಳ್ಳಲು ತಿಂಗಳಿನಲ್ಲಿ ಒಂದು ವಾರಗಳ ಕಾಲ ಈ ಆಹಾರ ಸೇವಿಸಿ ಬೊಜ್ಜನ್ನು ಕರಗಿಸಿಕೊಳ್ಳಿ.

ನೀವು ಒಂದು ವಾರದಲ್ಲಿ ಬೆಳಿಗ್ಗೆ ಎದ್ದ ನಂತರ ತಪ್ಪದೇ 3-4 ಗ್ಲಾಸ್ ನೀರನ್ನು ಕುಡಿಯಿರಿ. ಹಾಗೇ ಬೆಳಿಗ್ಗೆ 11 ಗಂಟೆಗೆ ಉಪಹಾರವನ್ನು ಸೇವಿಸಬೇಕು. ಈ ಉಪಹಾರದಲ್ಲಿ ಬೇಳೆಕಾಳುಗಳು, ರೊಟ್ಟಿ, ತರಕಾರಿಗಳು, ಸಲಾಡ್, ಮೊಸರು, ಮೀನು, ಚಿಕನ್, ಮೊಟ್ಟೆಗಳನ್ನು ಸೇವಿಸಬಹುದು.

ಸಂಜೆ 4-5 ರ ನಡುವೆ ನೀವು ಲಘು ಉಪಹಾರವನ್ನು ಸೇವಿಸಿ. ಇದರಲ್ಲಿ ನೀವು ಸ್ಯಾಂಡ್ ವಿಚ್, ಚೀಸ್ , ಕಡಲೆ, ರಾಜ್ಮಾ ಸಲಾಡ್ ಅನ್ನು ತಿನ್ನಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗೇ ರಾತ್ರಿಯ ಊಟ ಲಘುವಾಗಿರಲಿ. ಅದನ್ನು 7 ಗಂಟೆಯೊಳಗೆ ಸೇವಿಸಿ. ಈ ವೇಳೆ ನೀವು ಗಂಜಿ, ಖಿಚಡಿ, ಓಟ್ಸ್ ಮತ್ತು ಸೂಪ್ ಕುಡಿಯಿರಿ.

ಮಲಗುವ 3 ಗಂಟೆಗಳ ಮೊದಲು ಆಹಾರವನ್ನು ಸೇವಿಸಿ ಮತ್ತು ಪ್ರತಿದಿನ ಕನಿಷ್ಠ 45 ನಿಮಿಷಗಳ ಕಾಲ ವ್ಯಾಯಾಮ ಮಾಡಿ.

ಒಂದು ತಿಂಗಳಿನಲ್ಲಿ ಒಂದು ವಾರ ಈ ಕ್ರಮ ಪಾಲಿಸಿದರೆ ನೀವು ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗುವುದು ಖಂಡಿತ.

For Latest News Updates, Join Our Whatsapp Community🚩
RELATED ARTICLES

Most Popular