HomeHealthಪ್ರತಿದಿನ ಒಮ್ಮೆಯಾದರೂ ತಿನ್ನಿ ಬೇಯಿಸಿದ ಕಡಲೆ ಕಾಳು…..!

ಪ್ರತಿದಿನ ಒಮ್ಮೆಯಾದರೂ ತಿನ್ನಿ ಬೇಯಿಸಿದ ಕಡಲೆ ಕಾಳು…..!

ಭಾರತದಲ್ಲಿ ಕಾಳುಗಳನ್ನು ತಿನ್ನಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಕಡಲೆ ಕಾಳು ನಮ್ಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿದೆ. ಸಾಮಾನ್ಯವಾಗಿ ಇದನ್ನು ನೀರಿನಲ್ಲಿ ನೆನೆಸಿ, ಬೇಯಿಸಿ ನಂತರ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ.

ಕಡಲೆ ಬೇಳೆ ಮತ್ತು ಹಿಟ್ಟಿನ ರೂಪದಲ್ಲಿಯೂ ನಾವು ಇದನ್ನು ಬಳಸುತ್ತೇವೆ. ಕಡಲೆ ಕಾಳುಗಳಲ್ಲಿ ಯಾವುದೇ ಪೋಷಕಾಂಶಗಳ ಕೊರತೆಯಿಲ್ಲ. ಇದು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಕಡಲೆ ಕಾಳನ್ನು ದಿನಕ್ಕೆ ಒಮ್ಮೆಯಾದರೂ ಬೇಯಿಸಿ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕಡಲೆ ಕಾಳುಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಪ್ರೊಟೀನ್ ಪ್ರಮಾಣವು ಇತರ ಅನೇಕ ಬೇಳೆಕಾಳುಗಳಿಗಿಂತ ತುಂಬಾ ಹೆಚ್ಚಾಗಿದೆ. ಇದು ಫೈಬರ್‌ನ ಸಮೃದ್ಧ ಮೂಲವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

100 ಗ್ರಾಂ ಕಡಲೆ ಕಾಳಿನಲ್ಲಿರುವ ಪೋಷಕಾಂಶಗಳು

ಶಕ್ತಿ-341 ಕೆಸಿಎಲ್‌

ಕಾರ್ಬೋಹೈಡ್ರೇಟ್‌ಗಳು – 58.99 ಗ್ರಾಂ

ಪ್ರೋಟೀನ್ – 25.21 ಗ್ರಾಂ

ಕೊಬ್ಬು – 1.64 ಗ್ರಾಂ

ಆಹಾರದ ಫೈಬರ್ – 18.3 ಗ್ರಾಂ

ಫೋಲೇಟ್‌ – 216 ಮಿಗ್ರಾಂ

ನಿಯಾಸಿನ್-1.447 ಮಿಗ್ರಾಂ

ಪಾಂಟೊಥೆನಿಕ್ ಆಮ್ಲ-0.906 ಮಿಗ್ರಾಂ

ಪಿರಿಡಾಕ್ಸಿನ್-0.281 ಮಿಗ್ರಾಂ

ರಿಬೋಫ್ಲಾವಿನ್-0.254 ಮಿಗ್ರಾಂ

ಥಯಾಮಿನ್ – 0.273 ಮಿಗ್ರಾಂ

ಜೀರ್ಣಕ್ರಿಯೆ ಚೆನ್ನಾಗಿರುತ್ತದೆ: ಬೇಯಿಸಿದ ಕಡಲೆಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಇದು ಮಲಬದ್ಧತೆ, ಗ್ಯಾಸ್ ಸೇರಿದಂತೆ ಅನೇಕ ಹೊಟ್ಟೆ ಸಮಸ್ಯೆಗಳನ್ನು ನಿವಾರಿಸುತ್ತದೆ.

ದೇಹಕ್ಕೆ ಶಕ್ತಿ ಸಿಗುತ್ತದೆ: ಬೇಯಿಸಿದ ಕಡಲೆ ತಿನ್ನುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ. ಆದ್ದರಿಂದ ತಜ್ಞರು ಬೆಳಗ್ಗೆ ಅದನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದು ದಿನವಿಡೀ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ತೂಕ ಇಳಿಕೆ ದಿನಕ್ಕೆ ಒಂದು ಬಾರಿ ಬೇಯಿಸಿದ ಕಡಲೆ ಕಾಳು ತಿಂದರೆ ತುಂಬಾ ಹೊತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಾಗಾಗಿ ನಾವು ಹೆಚ್ಚು ತಿನ್ನುವ ಅಗತ್ಯವಿಲ್ಲ. ಇದೇ ರೀತಿ ನಿಯಂತ್ರಿಸಿಕೊಂಡರೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

For Latest News Updates, Join Our Whatsapp Community🚩
RELATED ARTICLES

Most Popular