ವೀಳ್ಯದೆಲೆ ಸೇವಿಸಿ – ಅನಾರೋಗ್ಯದಿಂದ ದೂರವಿರಿ

ವೀಳ್ಯದೆಲೆಯ ರಸ ತೆಗೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಮಕ್ಕಳಿಗೆ ಕುಡಿಸಿದರೆ ಕೆಮ್ಮು, ಕಫ ದೂರವಾಗುತ್ತದೆ. ಊಟ ಅದ ಮೇಲೆ ವೀಳ್ಯದೆಲೆ – ಅಡಿಕೆ ಹಾಕಿಕೊಳ್ಳುವುದರಿಂದ ಸೇವಿಸಿದ ಆಹಾರ ಸುಲಭವಾಗಿ ಜೀರ್ಣ ಆಗುತ್ತದೆ.

ನಿಯಮಿತವಾಗಿ ವೀಳ್ಯದೆಲೆ ಸೇವಿಸುತ್ತಾ ಬಂದರೆ ಮಧುಮೇಹದ ಸಮಸ್ಯೆ ಕಡಿಮೆ ಆಗುತ್ತದೆ. ವೀಳ್ಯದೆಲೆಯ ರಸದ ಜೊತೆಗೆ ಜೇನುತುಪ್ಪ ಸೇರಿಸಿ ಕುಡಿದರೆ ನರಗಳ ದೌರ್ಬಲ್ಯ ಕಡಿಮೆ ಆಗುತ್ತದೆ, ಜೊತೆಗೆ ಮೂಳೆಗಳು ಗಟ್ಟಿ ಆಗುತ್ತದೆ. ವೀಳ್ಯದೆಲೆಯ ರಸದ ಜೊತೆಗೆ ಹಾಲನ್ನು ಸೇರಿಸಿ ಕುಡಿಯುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆಗಳು ದೂರ ಆಗುತ್ತದೆ.

ಸಣ್ಣ ಮಕ್ಕಳಿಗೆ ಕಫ ಕಟ್ಟಿ ಉಸಿರಾಟದ ತೊಂದರೆ ಆದಾಗ ವೀಳ್ಯದೆಲೆಗೆ ಸ್ವಲ್ಪ ಹರಳೆಣ್ಣೆ ಹಾಕಿ ಅದನ್ನು ಬಿಸಿ ಮಾಡಿ ಎದೆ ಮೇಲೆ ಇಟ್ಟರೆ ಉಸಿರಾಟದ ತೊಂದರೆ ಸರಿ ಆಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ದೂರ ಆಗುತ್ತದೆ. ವೀಳ್ಯದೆಲೆಗೆ ಲವಂಗ ಸೇರಿಸಿ ತಿನ್ನುವುದರಿಂದ ಗಂಟಲು ಕೆರೆತ, ಒಣ ಕೆಮ್ಮು, ಹೊಟ್ಟೆ ಉಬ್ಬರ ದೂರ ಆಗುತ್ತದೆ.

ಗರ್ಭಿಣಿಯರು ವಾಂತಿ, ಬಿಕ್ಕಳಿಕೆ ಬರುವ ಸಮಯದಲ್ಲಿ ವೀಳ್ಯದೆಲೆಗೆ ಸ್ವಲ್ಪ ಅಡಿಕೆಯ ಚೂರು, ಏಲಕ್ಕಿ ಸೇರಿಸಿ ತಿಂದರೆ ಸಮಸ್ಯೆ ಗುಣ ಆಗುತ್ತದೆ. ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚು ಇರುವುದರಿಂದ ಇದನ್ನು ಊಟದ ನಂತರ ಸೇವಿಸುವುದು ಬಹಳ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read