HomeRecipiesಸೇವಿಸಿ ಆರೋಗ್ಯಕರ ʼಕಡಲೆಕಾಳಿನ ಸಲಾಡ್’

ಸೇವಿಸಿ ಆರೋಗ್ಯಕರ ʼಕಡಲೆಕಾಳಿನ ಸಲಾಡ್’

ಕೆಲವರಿಗೆ ಊಟಕ್ಕಿಂತ ಸಲಾಡ್ ಮಾಡಿಕೊಂಡು ತಿನ್ನುವುದು ಇಷ್ಟವಾಗುತ್ತದೆ. ಅಂಥವರು ಈ ಚನ್ನಾ ಕಡಲೆಕಾಳಿನ ಸಲಾಡ್ ಮಾಡಿಕೊಂಡು ತಿಂದರೆ ಹೊಟ್ಟೆಯೂ ತುಂಬುತ್ತದೆ ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2 ಕಪ್-ಚನ್ನಾ ಕಡಲೆಕಾಳು, ½ ಕಪ್-ಕತ್ತರಿಸಿದ ಈರುಳ್ಳಿ, ½ ಕಪ್- ಕತ್ತರಿಸಿದ ಸೌತೆಕಾಯಿ, ½ ಕಪ್-ಕತ್ತರಿಸಿದ ಟೊಮೆಟೊ, ¼ ಕಪ್-ಕೊತ್ತಂಬರಿ ಸೊಪ್ಪು, ಲಿಂಬೆಹಣ್ಣಿನ ರಸ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ½ ಕಪ್- ಮೊಸರು, ¼ ಕಪ್-ಪುದೀನಾ ಎಲೆ, ½ ಟೀ ಸ್ಪೂನ್-ಕಾಳುಮೆಣಸಿನ ಪುಡಿ.

ಮಾಡುವ ವಿಧಾನ:

ಕಡಲೆಕಾಳನ್ನು ಚೆನ್ನಾಗಿ ತೊಳೆದು 5 ಗಂಟೆಗಳ ಕಾಲ ನೆನೆಸಿಡಿ. ನಂತರ ಕುಕ್ಕರ್ ಗೆ 1 ½ ಕಪ್ ನೀರು ಹಾಕಿ ಅದಕ್ಕೆ ಕಡಲೆಕಾಳು ಹಾಕಿ ಅದಕ್ಕೆ ಉಪ್ಪು ಸೇರಿಸಿ 2 ವಿಷಲ್ ಕೂಗಿಸಿಕೊಳ್ಳಿ. ಕಡಲೆಕಾಳು ತುಂಬಾ ಬೇಯುವುದು ಬೇಡ. ಬೆಂದ ಕಡಲೆಕಾಳಿನ ನೀರು ಬಸಿದುಕೊಂಡು ಅದು ತಣ್ಣಗಾದ ಮೇಲೆ ಒಂದು ಬೌಲ್ ಗೆ ಹಾಕಿ. ನಂತರ ಇದಕ್ಕೆ ಕತ್ತರಿಸಿದ ಸೌತೆಕಾಯಿ, ಕೊತ್ತಂಬರಿಸೊಪ್ಪು, ಈರುಳ್ಳಿ, ಪುದೀನಾ ಸೊಪ್ಪು, ಮೊಸರು, ಕಾಳುಮೆಣಸಿನ ಪುಡಿ, ಉಪ್ಪು, ಲಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ ಸವಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular