HomeBeautyಸುಲಭವಾಗಿ ಮನೆಯಲ್ಲೇ ತಯಾರಿಸಿ ʼಶಾಂಪೂʼ

ಸುಲಭವಾಗಿ ಮನೆಯಲ್ಲೇ ತಯಾರಿಸಿ ʼಶಾಂಪೂʼ

ಈಗ ಮಾರುಕಟ್ಟೆಯಲ್ಲಿ ನಾನಾ ಬಗೆಯ ಶಾಂಪೂಗಳು ಇವೆ. ಆದರೆ ಮನೆಯಲ್ಲಿ ಶಾಂಪೂ ತಯಾರಿಸಿ ಬಳಸಿದರೆ ನಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಜತೆಗೆ ತಲೆಹೊಟ್ಟು, ಕೂದಲು ಉದುರುವಿಕೆ ಕೂಡ ಕಡಿಮೆಯಾಗುತ್ತದೆ. ಸುಲಭವಾಗಿ ಮಾಡುವ ಶಾಂಪೂವಿನ ವಿಧಾನ ಇಲ್ಲಿದೆ ನೋಡಿ.

1 ಕಪ್ ನೊರೆಕಾಯಿ (ಸೋಪ್ ನಟ್), 2 ಟೇಬಲ್ ಸ್ಪೂನ್ ಮೆಂತೆಕಾಳು ತೆಗೆದುಕೊಳ್ಳಿ. ಇದನ್ನು ಬಿಸಿಲಿನಲ್ಲಿ 1 ದಿನಗಳ ಕಾಲ ಚೆನ್ನಾಗಿ ಒಣಗಿಸಿ. ನೊರೆಕಾಯಿಯನ್ನು ಸ್ವಲ್ಪ ಗುದ್ದಿ ಅದರ ಬೀಜ ತೆಗೆದುಕೊಳ್ಳಿ. ನಂತರ ನೊರೆಕಾಯಿ ಹಾಗೂ ಮೆಂತೆಕಾಳುಗಳನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡು ಒಂದು ಡಬ್ಬದಲ್ಲಿ ಹಾಕಿ ಸ್ಟೋರ್ ಮಾಡಿಟ್ಟುಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಲೆಸ್ನಾನ ಮಾಡುವ ದಿನ ಒಂದು ಬೌಲ್ ನೀರನ್ನು ತೆಗೆದುಕೊಂಡು ಅದನ್ನು ಗ್ಯಾಸ್ ಮೇಲೆ ಇಡಿ. ಅದು ಬಿಸಿಯಾಗುತ್ತಲೇ ಅದಕ್ಕೆ 4 ಚಮಚ ಮಾಡಿಟ್ಟುಕೊಂಡ ಪುಡಿಯನ್ನು ಹಾಕಿ 3 ನಿಮಿಷಗಳ ಕಾಲ ಕುದಿಸಿ. ನಂತರ ಸ್ವಲ್ಪ ತಣ್ಣಗಾದ ಮೇಲೆ ಕೈಯಿಂದ ಈ ಮಿಶ್ರಣವನ್ನು ಚೆನ್ನಾಗಿ ಹಿಸುಕಿ ನಂತರ ಶೋಧಿಸಿಕೊಂಡು ಈ ನೀರಿನಿಂದ ಸ್ನಾನ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular