HomeLatest Newsಸುಲಭವಾಗಿ ಮಾಡಿ ಸವಿಯಾದ ಗೋಧಿ ಹಿಟ್ಟಿನ ಹಲ್ವಾ

ಸುಲಭವಾಗಿ ಮಾಡಿ ಸವಿಯಾದ ಗೋಧಿ ಹಿಟ್ಟಿನ ಹಲ್ವಾ

ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆ ಎಂದಾಕ್ಷಣ ಏನಾದರೂ ಸಿಹಿ ಮಾಡುವುದಕ್ಕೆ ತಯಾರು ಮಾಡುತ್ತೇವೆ. ತುಂಬಾ ಸಮಯವನ್ನು ಅಡುಗೆ ಮಾಡುವುದಕ್ಕೆಂದು ಕಳೆದುಬಿಟ್ಟರೆ ಬಂದವರೊಂದಿಗೆ ಸ್ವಲ್ಪ ಹೊತ್ತು ಮಾತನಾಡುವುದಕ್ಕೆ ಆಗುವುದಿಲ್ಲ.

ಹಾಗಾಗಿ ಇಲ್ಲಿ ಸುಲಭವಾಗಿ ಮಾಡುವ ಗೋಧಿಹಿಟ್ಟಿನ ಹಲ್ವಾ ಇದೆ. ಇದು ಮಾಡುವುದಕ್ಕೂ ಸುಲಭ. ತಿನ್ನುವುದಕ್ಕೂ ತುಂಬಾ ಚೆನ್ನಾಗಿರುತ್ತದೆ.

ಮೊದಲಿಗೆ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಕಪ್ ನೀರು ಹಾಕಿ. ನಂತರ ಅದಕ್ಕೆ 1 ಕಪ್ ಸಕ್ಕರೆ ಕುದಿಸಿಕೊಳ್ಳಿ. ಸಕ್ಕರೆ ಕರಗಿದ ಮೇಲೆ ಗ್ಯಾಸ್ ಆಫ್ ಮಾಡಿ. ನಂತರ ಒಂದು ದಪ್ಪ ತಳದ ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು, ಅದಕ್ಕೆ 1 ಕಪ್ ತುಪ್ಪ ಹಾಕಿ ಅದು ಕರಗುತ್ತಲೆ ಅದಕ್ಕೆ 1 ಕಪ್ ಗೋಧಿಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಗೋಧಿ ಹಿಟ್ಟಿನ ಮಿಶ್ರಣ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಅದಕ್ಕೆ ಮಾಡಿಟ್ಟುಕೊಂಡ ಸಕ್ಕರೆ ಪಾಕವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣ ತಳ ಬಿಡುವವರೆಗೆ ಚೆನ್ನಾಗಿ ಕೈಯಾಡಿಸುತ್ತಾ ಇರಿ. ನಂತರ ಒಂದು ಪ್ಲೇಟ್ ಗೆ ಹಾಕಿಕೊಂಡು ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular