HomeLatest Newsಸುಲಭವಾಗಿ ಮಾಡಿ ಸವಿಯಿರಿ ‘ಬಾದಾಮಿ ಪಾಯಸʼ

ಸುಲಭವಾಗಿ ಮಾಡಿ ಸವಿಯಿರಿ ‘ಬಾದಾಮಿ ಪಾಯಸʼ

ಸಿಹಿ ತಿನ್ನುವ ಆಸೆ ಆಗುತ್ತಿದೆಯಾ…? ಮನೆಯಲ್ಲಿ ಬಾದಾಮಿ ಇದ್ದರೆ ಥಟ್ಟಂತ ಮಾಡಿ ಈ ಬಾದಾಮಿ ಪಾಯಸ. ಬಾದಾಮಿ ಸ್ವಲ್ಪ ದುಬಾರಿಯಾದರೂ ಅಪರೂಪಕ್ಕೆ ಇದರ ಪಾಯಸ ಮಾಡಿಕೊಂಡು ಸವಿಯಬಹುದು ತುಂಬಾ ಚೆನ್ನಾಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು:

30 ಬಾದಾಮಿ, 3 ಕಪ್ – ಹಾಲು, 4 ಟೇಬಲ್ ಸ್ಪೂನ್ – ಸಕ್ಕರೆ, 3 – ಏಲಕ್ಕಿ, 1 ಚಿಟಿಕೆ – ಕೇಸರಿ ದಳ, ತುಪ್ಪ – 2 ಟೇಬಲ್ ಸ್ಪೂನ್, ಬಾದಾಮಿ, ಪಿಸ್ತಾ, ಗೋಡಂಬಿ ಚೂರುಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಬಾದಾಮಿಯನ್ನು ಒಂದು ಅಗಲವಾದ ಬೌಲ್ ಗೆ ಹಾಕಿ 5 ಗಂಟೆಗಳ ಕಾಲ ನೆನೆಸಿಡಿ. ನಂತರ ಇದರ ಸಿಪ್ಪೆ ತೆಗೆದು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಹಾಲು, ಏಲಕ್ಕಿ, ಸಕ್ಕರೆ, ಕೇಸರಿ ದಳ ಸೇರಿಸಿ ರುಬ್ಬಿಕೊಳ್ಳಿ.

ನಂತರ ಹಾಲನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ನಂತರ ಇದಕ್ಕೆ ರುಬ್ಬಿಟ್ಟುಕೊಂಡ ಬಾದಾಮಿ ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇದು ಕುದಿಯಲು ಶುರುವಾದಾಗ ಗ್ಯಾಸ್ ನ ಉರಿ ಸಣ್ಣಗೆ ಮಾಡಿಕೊಂಡು ಮತ್ತೊಮ್ಮೆ ಕುದಿಸಿ ಗ್ಯಾಸ್ ಆಫ್ ಮಾಡಿ.

ಒಂದು ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಬಾದಾಮಿ, ಗೋಡಂಬಿ, ಪಿಸ್ತಾಗಳನ್ನು ಫ್ರೈ ಮಾಡಿಕೊಂಡು ಪಾಯಸಕ್ಕೆ ಸೇರಿಸಿ.

For Latest News Updates, Join Our Whatsapp Community🚩
RELATED ARTICLES

Most Popular