HomeIndiaEarthquake: ನೇಪಾಳಕ್ಕೆ ಮತ್ತೊಂದು ಶಾಕ್ ; 5.3 ತೀವ್ರತೆಯ ಪ್ರಬಲ ಭೂಕಂಪ!

Earthquake: ನೇಪಾಳಕ್ಕೆ ಮತ್ತೊಂದು ಶಾಕ್ ; 5.3 ತೀವ್ರತೆಯ ಪ್ರಬಲ ಭೂಕಂಪ!

ಮುಸ್ತಾಂಗ್‌: ಭೀಕರ ಪ್ರವಾಹದಿಂದ ಈಗಾಗಲೇ ತತ್ತರಿಸಿರುವ ನೇಪಾಳಕ್ಕೆ ಇದೀಗ ಭೂಕಂಪದ ಆಘಾತ ಎದುರಾಗಿದೆ. ದೇಶದ ವಾಯವ್ಯ ಭಾಗದಲ್ಲಿರುವ ಮುಸ್ತಾಂಗ್‌ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಇದರ ಕಂಪನಗಳು ನೆರೆಯ ಮನಾಂಗ್‌, ಡೋಲ್ಪಾ ಹಾಗೂ ಮ್ಯಾಗ್ದಿ ಜಿಲ್ಲೆಗಳಲ್ಲೂ ಅನುಭವವಾಗಿವೆ. ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರದ ಅಧಿಕೃತ ಮಾಹಿತಿ ಪ್ರಕಾರ, ಭಾರತೀಯ ಕಾಲಮಾನ ರಾತ್ರಿ 9.38ಕ್ಕೆ ಭೂ ಕಂಪನ ದಾಖಲಾಗಿದೆ. ವಾಯವ್ಯ ನೇಪಾಳದ 29.022 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 83.978 ಡಿಗ್ರಿ ಪೂರ್ವ ರೇಖಾಂಶದಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಗುರುತಿಸಲಾಗಿದೆ. ಭೂ ಮೇಲ್ಮೈಯಿಂದ ಸುಮಾರು 143 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.

ಭೂಕಂಪದ ಕೇಂದ್ರ ಆಳದಲ್ಲಿದ್ದ ಕಾರಣ ಮೇಲ್ಮೈಯಲ್ಲಿ ಇದರ ಪರಿಣಾಮ ಸೀಮಿತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಯಾವುದೇ ಪ್ರಾಣಹಾನಿ ಅಥವಾ ಭಾರೀ ಕಟ್ಟಡ ಹಾನಿ ವರದಿಯಾಗಿಲ್ಲ. ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರದ ಪ್ರಕಾರ, ರಾತ್ರಿ 9.53ಕ್ಕೆ ದಾಖಲಾಗಿದ್ದ ಈ ಭೂಕಂಪದ ಕೇಂದ್ರ ಮುಸ್ತಾಂಗ್‌ನ ಲೋಮಂಥಾಂಗ್ ಪ್ರದೇಶವಾಗಿತ್ತು. ಇದು ರಾಜಧಾನಿ ಕಠ್ಮಂಡುವಿನಿಂದ ವಾಯವ್ಯ ದಿಕ್ಕಿನಲ್ಲಿ ಸುಮಾರು 375 ಕಿಲೋಮೀಟರ್ ದೂರದಲ್ಲಿದೆ.

ಕಳೆದ ತಿಂಗಳು ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದಿಂದ ನೇಪಾಳ ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಈ ದುರಂತದಲ್ಲಿ 1,357 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆಗಳು 14ನೇ ದಿನಕ್ಕೆ ತಲುಪಿವೆ.

ರಾಯಿಟರ್ಸ್ ಅಂದಾಜಿನ ಪ್ರಕಾರ, ಪ್ರವಾಹದಿಂದ ನೇರವಾಗಿ ಸುಮಾರು 256 ಕೋಟಿ ಡಾಲರ್ ನಷ್ಟವಾಗಿದೆ. ಆರ್ಥಿಕ ಪರಿಣಾಮ ಹಾಗೂ ದೀರ್ಘಕಾಲೀನ ಪುನರ್‌ನಿರ್ಮಾಣ ವೆಚ್ಚ 400 ಕೋಟಿಯಿಂದ 700 ಕೋಟಿ ಡಾಲರ್‌ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ನೇಪಾಳ ಪೊಲೀಸರು 1,366 ಮಂದಿ ಮೃತಪಟ್ಟಿರುವುದಾಗಿ ಹಾಗೂ 4,077 ಮಂದಿ ಇನ್ನೂ ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಇದುವರೆಗೆ 533 ಪುರುಷರು ಮತ್ತು 339 ಮಹಿಳೆಯರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ಪೈಕಿ 102 ಮೃತದೇಹಗಳನ್ನು ಗುರುತಿಸಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತ: ಭಾರತವೂ ನೇಪಾಳಕ್ಕೆ ನೆರವು ನೀಡುತ್ತಿದೆ. ಚಿಲಿಮೆ ಸುರಂಗದಲ್ಲಿರುವ ಅವಶೇಷಗಳು ಮತ್ತು ಕೆಸರನ್ನು ತೆರವುಗೊಳಿಸಲು ಭಾರತ ಹಾಗೂ ನೇಪಾಳದ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ ಎಂದು ನೇಪಾಳದಲ್ಲಿನ ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ ತಿಳಿಸಿದ್ದಾರೆ.

ಇಳಿಜಾರಿನಲ್ಲಿರುವ ಸುರಂಗದಲ್ಲಿ ಸಂಚಾರಕ್ಕೆ ಎಚ್‌ಡಿಪಿಇ ಪೈಪ್‌ಗಳನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸ್ಯಾಫ್ರುಬೆಸಿ ಪ್ರದೇಶದಿಂದ ಸುರಂಗದ ಪ್ರವೇಶದ್ವಾರದವರೆಗೆ ತಾತ್ಕಾಲಿಕ ರಸ್ತೆ ನಿರ್ಮಿಸಲು ನಿಯಂತ್ರಿತ ಸ್ಫೋಟಗಳ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (IMD) 16 ರಾಜ್ಯಗಳಲ್ಲಿ ಹವಾಮಾನಕ್ಕೆ ಸಂಬಂಧಿಸಿದಂತೆ ಮಹತ್ವದ ಎಚ್ಚರಿಕೆ ನೀಡಿದೆ. ಈ ರಾಜ್ಯಗಳಲ್ಲಿ ಗುಡುಗು-ಮಿಂಚು, ಬಿರುಗಾಳಿ ಸೇರಿದಂತೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕೆಲವೆಡೆ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೆಪ್ಟೆಂಬರ್ 9ರಂದು ದೇಶದ ಹಲವೆಡೆ ಮಳೆ ಅಬ್ಬರ

ಸೆಪ್ಟೆಂಬರ್ 9, 2026ರಂದು ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ 16 ರಾಜ್ಯಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯ ಸಂದರ್ಭದಲ್ಲಿ ಭೂಕುಸಿತ ಸಂಭವಿಸುವ ಅಪಾಯವಿದೆ. ಬಯಲು ಪ್ರದೇಶಗಳಲ್ಲಿ ಬಲವಾದ ಗಾಳಿ ಬೀಸುವುದರಿಂದ ಮರಗಳ ಕೊಂಬೆಗಳು ಮುರಿದು ಬೀಳುವ ಸಾಧ್ಯತೆಯಿದೆ. ಹೀಗಾಗಿ ಮಳೆ ಮತ್ತು ಬಿರುಗಾಳಿಯ ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲದಂತೆ ಸೂಚಿಸಲಾಗಿದೆ.

ಇದೇ ವೇಳೆ ಸಮುದ್ರದಲ್ಲಿ ಬಿರುಗಾಳಿ ಸಹಿತ ಎತ್ತರದ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಮೀನುಗಾರರು ಹವಾಮಾನ ಕೆಟ್ಟಿರುವ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿರುವುದು ಹಾಗೂ ಹಲವು ರಾಜ್ಯಗಳಲ್ಲಿ ಮೇಲ್ಮೈ ಗಾಳಿಯ ಚಕ್ರವಾತೀಯ ಪರಿಚಲನೆ ಉಂಟಾಗಿರುವುದರಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಈ 16 ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ

IMD ಪ್ರಕಾರ ದೆಹಲಿ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ, ಹರಿಯಾಣ, ಪಂಜಾಬ್, ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ ಮತ್ತು ಮಹಾರಾಷ್ಟ್ರಗಳಲ್ಲಿ ಮಳೆಯ ಎಚ್ಚರಿಕೆ ನೀಡಲಾಗಿದೆ.ಈ ಅವಧಿಯಲ್ಲಿ ಕೆಲವು ಪ್ರದೇಶಗಳಲ್ಲಿ ಗಂಟೆಗೆ 60 ಕಿ.ಮೀ ವೇಗದವರೆಗೆ ಗಾಳಿ ಬೀಸುವ ಸಾಧ್ಯತೆಯಿದೆ.

ಪ್ರಯಾಗರಾಜ್, ಗೌತಮ್ ಬುದ್ಧ ನಗರ, ಕಾನ್ಪುರ, ಮಿರ್ಜಾಪುರ, ದೇವರಿಯಾ, ಶಹಜಹಾನ್‌ಪುರ, ಮೀರತ್, ಅಂಬೇಡ್ಕರ್ ನಗರ, ಅಲಿಗಢ, ಮಥುರಾ, ಬಲರಾಮ್‌ಪುರ, ಬಹ್ರೈಚ್, ವಾರಾಣಸಿ, ರಾಮ್‌ಪುರ, ಸೋನ್‌ಭದ್ರ ಮತ್ತು ಗೋರಖ್‌ಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಈ ವೇಳೆ ಗಂಟೆಗೆ 70 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಲಖನೌನಲ್ಲಿ ಗರಿಷ್ಠ 33°C ಹಾಗೂ ಕನಿಷ್ಠ 26°C ತಾಪಮಾನ ಇರಬಹುದು.

ಬಿಹಾರದಲ್ಲಿ ಬಿರುಗಾಳಿ ಸಹಿತ ಮಳೆ

ಪಾಟ್ನಾ ಸೇರಿದಂತೆ ಬಕ್ಸರ್, ಭೋಜ್‌ಪುರ, ಗಯಾ, ವೈಶಾಲಿ, ದರ್ಭಂಗಾ, ಅರಾರಿಯಾ, ಪೂರ್ಣಿಯಾ, ಸಮಸ್ತಿಪುರ, ಸಿವಾನ್, ಮುಜಫರ್‌ಪುರ, ಪೂರ್ವ ಚಂಪಾರಣ್, ಮಧುಬನಿ ಮತ್ತು ಪಶ್ಚಿಮ ಚಂಪಾರಣ್ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ ಇದೆ.ಗಾಳಿಯ ವೇಗ ಗಂಟೆಗೆ 55 ಕಿ.ಮೀ.ವರೆಗೆ ಇರಬಹುದು. ಪಾಟ್ನಾದಲ್ಲಿ ಗರಿಷ್ಠ 32°C ಹಾಗೂ ಕನಿಷ್ಠ 27°C ತಾಪಮಾನ ಇರಲಿದೆ.

ರಾಜಸ್ಥಾನದಲ್ಲೂ ಮಳೆಯ ಎಚ್ಚರಿಕೆ

ರಾಜಧಾನಿ ಜೈಪುರ ಸೇರಿದಂತೆ ಬಿಕಾನೇರ್, ಕೋಟಾ, ಟೋಂಕ್, ಉದಯಪುರ, ಬುಂದಿ, ಚಿತ್ತೋರ್‌ಗಢ, ಅಜ್ಮೇರ್, ಭಿಲ್ವಾರಾ, ಸವಾಯಿ ಮಾಧೋಪುರ ಮತ್ತು ಭರತ್‌ಪುರದಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಈ ವೇಳೆ ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಜೈಪುರದಲ್ಲಿ ಗರಿಷ್ಠ 34°C ಹಾಗೂ ಕನಿಷ್ಠ 24°C ತಾಪಮಾನ ಇರಬಹುದು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular