HomeKarnatakaಭೂಕಂಪ, ಬಾಂಬ್ ಸ್ಫೋಟ, ಯುದ್ಧ ಭೀತಿ, ಅಕಾಲಿಕ ಮಳೆ, ಜಲಕಂಠಕದಿಂದ ಜನ ತಲ್ಲಣ: ಕೋಡಿಮಠ ಸ್ವಾಮೀಜಿ...

ಭೂಕಂಪ, ಬಾಂಬ್ ಸ್ಫೋಟ, ಯುದ್ಧ ಭೀತಿ, ಅಕಾಲಿಕ ಮಳೆ, ಜಲಕಂಠಕದಿಂದ ಜನ ತಲ್ಲಣ: ಕೋಡಿಮಠ ಸ್ವಾಮೀಜಿ ಸ್ಪೋಟಕ ಭವಿಷ್ಯ

ಗದಗ: 2024ರಲ್ಲಿ ಅಕಾಲಿಕ ಮಳೆಯಾಗಲಿದ್ದು, ಜಗತ್ತಿಗೆ ಒಳ್ಳೆಯ ದಿನಗಳು ಇಲ್ಲ. ಬಾಂಬ್ ಸ್ಪೋಟಿಸುವ ಸಂಭವ ಇದೆ. ಯುದ್ಧ ಭೀತಿ ಆವರಿಸಲಿದೆ. ಭೂಕಂಪ ಜಲಕಂಠಕವೂ ಇದ್ದು, ಜನ ತಲ್ಲಣಗೊಳ್ಳುತ್ತಾರೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ. ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣಗಳಿವೆ. ಯುದ್ಧ ಭೀತಿ, ಅಣುಬಾಂಬ್ ಸ್ಪೋಟಿಸುವ. ಜಗತ್ತಿಗೆ ವಿನಾಶ ಕಾದಿದೆ. ರೋಗ, ಸುನಾಮಿ ಉಂಟಾಗುವ ಸಂಭವ ಇದೆ. ಜನ ದುಃಖ ಅನುಭವಿಸುತ್ತಾರೆ. ದೈವ ನಂಬುವುದೇ ಇದಕ್ಕೆ ಪರಿಹಾರ. ದೈವದ ಮೊರೆ ಹೋಗಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular