HomeLifestyleಕಿವಿಯಲ್ಲಿ ಇಯರ್‌ಫೋನ್ ಇಟ್ಟುಕೊಳ್ಳುವ ಮುನ್ನ ಹುಷಾರ್: ಸ್ಫೋಟದ ತೀವ್ರತೆಗೆ ಯುವತಿಯ ಶ್ರವಣ ಶಕ್ತಿ ಸಾವು

ಕಿವಿಯಲ್ಲಿ ಇಯರ್‌ಫೋನ್ ಇಟ್ಟುಕೊಳ್ಳುವ ಮುನ್ನ ಹುಷಾರ್: ಸ್ಫೋಟದ ತೀವ್ರತೆಗೆ ಯುವತಿಯ ಶ್ರವಣ ಶಕ್ತಿ ಸಾವು

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರೂ ವೈರ್‌ಲೆಸ್ ಇಯರ್‌ಬಡ್ಸ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ತುರ್ಕಿಯಲ್ಲಿ ನಡೆದ ಭೀಕರ ಘಟನೆಯೊಂದು ಈಗ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಯುವತಿಯೊಬ್ಬಳು ಇಯರ್‌ಬಡ್ಸ್ ಧರಿಸಿದ್ದಾಗ ಅದು ಕಿವಿಯಲ್ಲೇ ಸ್ಫೋಟಗೊಂಡಿದ್ದು, ಇದರ ಪರಿಣಾಮವಾಗಿ ಆಕೆ ಶಾಶ್ವತವಾಗಿ ಕೇಳುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾಳೆ.

ಈ ಘಟನೆಯ ಬಗ್ಗೆ ಬ್ರ್ಯಾಂಡ್‌ನ ಫೋರಂನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಸ್ಫೋಟಕ್ಕೆ ನಿಖರವಾದ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಇಯರ್‌ಫೋನ್ ಇಲ್ಲದೆ ಜೀವನವೇ ಇಲ್ಲ ಎನ್ನುವಂತಾಗಿರುವ ಈ ಕಾಲದಲ್ಲಿ, ಇಂತಹ ಘಟನೆಗಳು ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಭೀತಿ ಹುಟ್ಟಿಸಿವೆ. ಕಿವಿಯ ಆರೋಗ್ಯ ಮತ್ತು ಇಂತಹ ಅವಘಡಗಳಿಂದ ತಪ್ಪಿಸಿಕೊಳ್ಳಲು ತಜ್ಞ ವೈದ್ಯರು ನೀಡಿರುವ ಪ್ರಮುಖ ಸಲಹೆಗಳು ಇಲ್ಲಿವೆ:

ನಿರಂತರ ಬಳಕೆ ಅಪಾಯಕಾರಿ: ಇಯರ್‌ಫೋನ್‌ಗಳನ್ನು ಗಂಟೆಗಟ್ಟಲೆ ಬಳಸುವುದರಿಂದ ಕಿವಿಯ ಒಳಗಿನ ಸೂಕ್ಷ್ಮ ನರಗಳಿಗೆ ಹಾನಿಯಾಗುತ್ತದೆ. ಶ್ರವಣ ದೋಷವನ್ನು ತಪ್ಪಿಸಲು ’60/60′ ನಿಯಮವನ್ನು ಪಾಲಿಸುವುದು ಉತ್ತಮ. ಅಂದರೆ, ಶೇಕಡಾ 60ರಷ್ಟು ವಾಲ್ಯೂಮ್‌ನಲ್ಲಿ ಕೇವಲ 60 ನಿಮಿಷ ಮಾತ್ರ ಬಳಸಿ ನಂತರ ಕಿವಿಗೆ ವಿಶ್ರಾಂತಿ ನೀಡಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಚ್ಛತೆ ಮತ್ತು ನಿರ್ವಹಣೆ: ಇಯರ್‌ಫೋನ್‌ಗಳಲ್ಲಿ ಬೆವರು, ಧೂಳು ಮತ್ತು ಕಿವಿಯ ಮೇಣ ಸಂಗ್ರಹವಾಗುವುದರಿಂದ ಅವುಗಳ ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳು ಹದಗೆಟ್ಟು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಒಣ ಮತ್ತು ಮೃದುವಾದ ಬಟ್ಟೆಯಿಂದ ಇವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಯಾವುದೇ ಕಾರಣಕ್ಕೂ ಆಲ್ಕೋಹಾಲ್ ಅಥವಾ ಎಣ್ಣೆಯುಕ್ತ ದ್ರವಗಳನ್ನು ಬಳಸಬೇಡಿ.

ಓವರ್ ಚಾರ್ಜಿಂಗ್ ಬೇಡ: ಮೊಬೈಲ್‌ನಂತೆ ಇಯರ್‌ಬಡ್ಸ್‌ಗಳನ್ನು ಕೂಡ ರಾತ್ರಿಯಿಡೀ ಚಾರ್ಜಿಂಗ್‌ಗೆ ಹಾಕಿ ಮಲಗುವ ಅಭ್ಯಾಸ ಬೇಡ. ಇದು ಬ್ಯಾಟರಿ ಬಿಸಿಯಾಗಲು ಮತ್ತು ಅವಘಡಕ್ಕೆ ಕಾರಣವಾಗಬಹುದು.

ಎಚ್ಚರಿಕೆಯ ಲಕ್ಷಣಗಳು: ಇಯರ್‌ಫೋನ್ ಬಳಸುವಾಗ ಕಿವಿ ಬಿಸಿಯಾಗುವುದು, ಕಿವಿ ಒಳಗಡೆ ತುರಿಕೆ ಉಂಟಾಗುವುದು ಅಥವಾ ಸಣ್ಣ ಮಟ್ಟದ ನೋವು ಕಾಣಿಸಿಕೊಂಡರೆ ತಕ್ಷಣವೇ ಅದರ ಬಳಕೆಯನ್ನು ನಿಲ್ಲಿಸಿ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ಕೂಡಲೇ ಇಎನ್‌ಟಿ (ENT) ತಜ್ಞರನ್ನು ಸಂಪರ್ಕಿಸುವುದು ಕ್ಷೇಮ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular