ವಿಜಯನಗರ(ಹೊಸಪೇಟೆ): ಜಿಲ್ಲೆಯಲ್ಲಿ ಭಾರತೀಯ ಮದ್ಯ ಅಥವಾ ವಿದೇಶಿ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಅರ್ಹ ಹೆಚ್-1 ಬಿಡ್ದಾರರಿಗೆ ಸಿ.ಎಲ್-2ಎ ಮತ್ತು ಸಿ.ಎಲ್-9ಎ ನಮೂನೆಗಳಲ್ಲಿ ಖಾಲಿ ಇರುವ ಅಥವಾ ಲಭ್ಯವಿರುವ ಅಬಕಾರಿ ಸನ್ಮದುಗಳನ್ನು (ಲೈಸೆನ್ಸ್) ನೀಡಲು ಅಬಕಾರಿ ಇಲಾಖೆಯು ಬಿಡ್ ಗಳನ್ನು ಆಹ್ವಾನಿಸಿದೆ.
ಈ ಇ-ಹರಾಜು ಪ್ರಕ್ರಿಯೆಯು ಅಧಿಕೃತ ವೆಬ್ಸೈಟ್ ಆದ https://www.mstcecommerce.com ಮೂಲಕ ನಡೆಯಲಿದ್ದು, ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ ನೀಡುವ ವರ್ಷವನ್ನು ಒಳಗೊಂಡAತೆ ಒಟ್ಟು ಐದು ಅಬಕಾರಿ ವರ್ಷಗಳ ಅವಧಿಗೆ ಅಂದರೆ 2026-27 ರಿಂದ 2030-31 ರವರೆಗೆ ಸನ್ಮದುಗಳನ್ನು ನೀಡಲಾಗುವುದು.
ಈ ಇ-ಹರಾಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನಿಯಮಾನುಸಾರ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದರಂತೆ ಪರಿಶಿಷ್ಟ ಜಾತಿ-ಎ ಗೆ ಶೇ 5.25, ಬಿ ಗೆ ಶೇ 5.25, ಸಿ ಗೆ ಶೇ 4.5 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 3 ರಷ್ಟು ಮೀಸಲಾತಿ ಇರಲಿದೆ.
ಬಿಡ್ದಾರರ ನೋಂದಣಿ ಈಗಾಗಲೇ ಆರಂಭವಾಗಿದ್ದು, ಸಂಭಾವ್ಯ ಬಿಡ್ದಾರರಿಗೆ ಹಾಗೂ ಜಿಲ್ಲಾ ಇ-ಹರಾಜು ನೋಡಲ್ ಅಧಿಕಾರಿಗಳಿಗೆ ಜುಲೈ 6 ರಿಂದ 14ರವರೆಗೆ ತರಬೇತಿ ನೀಡಲಾಗುವುದು.
ಜುಲೈ 24 ರಿಂದ 31ರವರೆಗೆ ನೇರ ಇ-ಹರಾಜು ಪ್ರಕ್ರಿಯೆ ನಡೆಯಲಾಗುವುದು.
ಇ-ಹರಾಜಿಗೆ ಸಂಬAಧಿಸಿದ ವಿವರವಾದ ಮಾರ್ಗಸೂಚಿ ಮತ್ತು ಮಾಹಿತಿಗಾಗಿ ಸಾರ್ವಜನಿಕರು ಹಾಗೂ ಆಸಕ್ತ ಬಿಡ್ದಾರರು ಇಲಾಖೆಯ ಅಧಿಕೃತ ವೆಬ್ಸೈಟ್ https://stateexcelise.karnataka.gov.in ಗೆ ಭೇಟಿ ನೀಡಿ ಪರಿಶೀಲಿಸಬುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8762342678, 08394-200250 ಗೆ ಸಂಪರ್ಕಿಸಬಹುದು ಎಂದು ಅಬಕಾರಿ ಉಪ ಆಯುಕ್ತ ಮಾದೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

