ಬೆಂಗಳೂರು: ತಾಂತ್ರಿಕ ಕಾರಣಗಳಿಂದ ಸರ್ವರ್ ಸಮಸ್ಯೆ ಎದುರಾಗಿದ್ದು, ಅದರ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಹೀಗಾಗಿ ಯುಜಿ ನೀಟ್ ರೋಲ್ ನಂಬರ್ ಜೋಡಣೆ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 7ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
ನವೀಕೃತ ಮಾಹಿತಿಗಳು
ವೈದ್ಯಕೀಯ, ದಂತವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ, ಈ ಕೆಳಕಂಡ ಪ್ರಕ್ರಿಯೆಗಳಿಗೆ ದಿನಾಂಕವನ್ನು 07-08-2026 ರವರೆಗೆ ವಿಸ್ತರಿಸಲಾಗಿದೆ.
ಎ) ಯುಜಿನೀಟ್ ರೋಲ್ ನಂಬರ್ ಅನ್ನು ಸಿಇಟಿ-2026 ರ ಅರ್ಜಿಗೆ ಲಿಂಕ್ ಮಾಡಲು
ಬಿ) ಯುಜಿನೀಟ್ ಕೋರ್ಸ್‌ಗಳಿಗೆ ಹೊಸದಾಗಿ ನೋಂದಣಿ ಮಾಡಿ ಅರ್ಜಿ ಸಲ್ಲಿಸಲು.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಮೇಲಿನಂತೆ ಕ್ರಮವಹಿಸಬಹುದಾಗಿದೆ.
ವಿವರವಾದ ಸೂಚನೆಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ವೆಬ್‌ಸೈಟ್ – UGNEET-2026 ನೋಡಿ.

