HomeKarnatakaಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಘೋರ ದುರಂತ: ಸಾಕಾನೆಗಳ ಜಗಳದ ನಡುವೆ ಸಿಲುಕಿ ಪ್ರವಾಸಿ ಮಹಿಳೆ...

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಘೋರ ದುರಂತ: ಸಾಕಾನೆಗಳ ಜಗಳದ ನಡುವೆ ಸಿಲುಕಿ ಪ್ರವಾಸಿ ಮಹಿಳೆ ಸ್ಥಳದಲ್ಲೇ ದುರ್ಮರಣ

ಪ್ರವಾಸಿಗರ ನೆಚ್ಚಿನ ತಾಣವಾದ ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ (Dubare Elephant Camp) ಭೀಕರ ದುರಂತವೊಂದು ಸಂಭವಿಸಿದೆ. ಆನೆಗಳಿಗೆ ಸ್ನಾನ ಮಾಡಿಸುವ (Elephant Bathing) ಪ್ರಕ್ರಿಯೆಯ ವೇಳೆ ಎರಡು ಸಾಕಾನೆಗಳ ನಡುವೆ ಇದ್ದಕ್ಕಿದ್ದಂತೆ ಭೀಕರ ಕಾಳಗ ಆರಂಭವಾಗಿದ್ದು, ಈ ವೇಳೆ ಆನೆಗಳ ಅಡಿಯಲ್ಲಿ ಸಿಲುಕಿ ಪ್ರವಾಸಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾರಾಂತ್ಯದ ಮೋಜಿನ ಕ್ಷಣ ಸದ್ಯ ಕಣ್ಣೀರಿನಲ್ಲಿ ಅಂತ್ಯವಾಗಿದೆ.

ನಡೆದಿದ್ದೇನು? ಎಲಿಫೆಂಟ್‌ ಬಾತಿಂಗ್‌ ವೇಳೆ ದುರಂತ

ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದುಬಾರೆ ಆನೆ ಶಿಬಿರಕ್ಕೆ ನೂರಾರು ಪ್ರವಾಸಿಗರು ಭೇಟಿ ನೀಡಿದ್ದರು. ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ದೃಶ್ಯವನ್ನು ವೀಕ್ಷಿಸಲು ನದಿಯ ದಡದಲ್ಲಿ ಪ್ರವಾಸಿಗರು ಜಮಾಯಿಸಿದ್ದರು. ಈ ವೇಳೆ ಶಿಬಿರದ ಸಾಕಾನೆಗಳಾದ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಇದ್ದಕ್ಕಿದ್ದಂತೆ ಜಗಳ ಆರಂಭವಾಗಿದೆ. ಕಂಜನ್ ಆನೆಯು ಮತ್ತೊಂದು ಆನೆಗೆ ಜೋರಾಗಿ ತಿವಿದಾಗ ಎರಡೂ ಆನೆಗಳ ನಡುವೆ ಭೀಕರ ಕಾದಾಟ ಶುರುವಾಗಿದೆ.

https://www.instagram.com/reel/DYeWLoZuqGB/?utm_source=ig_web_copy_link&igsh=NTc4MTIwNjQ2YQ==

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆನೆಗಳ ನಡುವೆ ಜಗಳ ತಾರಕಕ್ಕೇರಿದಾಗ ಗಜರಾಜನೊಂದು ಹತೋಟಿ ತಪ್ಪಿ ಪ್ರವಾಸಿಗರಿದ್ದ ಕಡೆ ನುಗ್ಗಿದೆ. ಈ ವೇಳೆ ಓಡಲು ಸಾಧ್ಯವಾಗದೆ ಆನೆಯ ಬೃಹತ್ ಗಾತ್ರದ ಭಾರಕ್ಕೆ ಸಿಲುಕಿದ ತಮಿಳುನಾಡಿನ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಜ್ಯುನೇಶ್ (33) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸ್ಥಳದಲ್ಲಿ ಪ್ರವಾಸಿಗರ ಚೀರಾಟ, ಆತಂಕದ ವಾತಾವರಣ

ಕಣ್ಮುಂದೆಯೇ ನಡೆದ ಈ ಭೀಕರ ಅನಾಹುತವನ್ನು ಕಂಡು ನದಿಯ ದಡದಲ್ಲಿದ್ದ ನೂರಾರು ಪ್ರವಾಸಿಗರು ಜೀವಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ದುಬಾರೆ ಆನೆ ಶಿಬಿರದಲ್ಲಿ ಆತಂಕ ಮತ್ತು ಸೂತಕದ ವಾತಾವರಣ ಮನೆ ಮಾಡಿದೆ. ಆನೆ ಶಿಬಿರದಲ್ಲಿ ಪ್ರವಾಸಿಗರ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಈಗ ಸಾರ್ವಜನಿಕ ವಲಯ ಹಾಗೂ ಪ್ರವಾಸಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular