HomeLive NewsWAR BREAKING: ದುಬೈ ಏರ್ ಪೋರ್ಟ್ ಬಳಿಯ ಇಂಧನ ಟ್ಯಾಂಕ್ ಮೇಲೆ ಇರಾನ್ ಡ್ರೋನ್ ದಾಳಿ:...

WAR BREAKING: ದುಬೈ ಏರ್ ಪೋರ್ಟ್ ಬಳಿಯ ಇಂಧನ ಟ್ಯಾಂಕ್ ಮೇಲೆ ಇರಾನ್ ಡ್ರೋನ್ ದಾಳಿ: ವಿಮಾನ ಹಾರಾಟ ಸ್ಥಗಿತ

ದುಬೈ: ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಇಂಧನ ಟ್ಯಾಂಕ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಪರಿಣಾಮ ಇಂಧನ ಟ್ಯಾಂಕ್ ಹೊತ್ತಿ ಉರಿದಿದ್ದು, ವಿಮಾನ ನಿಲ್ದಾಣದ ಬಳಿ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ವ್ಯಾಪಿಸಿದೆ. ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ದುಬೈ ಏರ್ ಪೋರ್ಟ್ ಸಮೀಪವೇ ಇರುವ ಇಂಧನ ಟ್ಯಾಂಕ್ ಇದಾಗಿದ್ದು, ಡ್ರೋನ್ ದಾಳಿಗೆ ಭಾರಿ ಬೆಂಕಿ ಹೊತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ದುಬೈ ಏರ್ ಪೋರ್ಟ್ ನಲ್ಲಿ ವಿಮಾನ ಹಾರಟ ಸಂಪೂರ್ಣ ಸ್ಥಗಿತಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದುಬೈಗೆ ಆಗಮಿಸುವ ಹಾಗೂ ದುಬೈನಿಂದ ನಿರ್ಗಮಿಸುವ ಎಲ್ಲಾ ವಿಮಾನ ಹಾರಾಟಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಏರ್ ಇಂಡಿಯಾ ವಿಮಾನ, ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುಬೈಗೆ ತೆರಳುವ ಹಾಗೂ ದುಬೈನಿಂದ ಆಗಮಿಸಿವ ಎಲ್ಲಾ ವಿಮಾನ ರದ್ದುಗೊಳಿಸಿರುವುದಾಗಿ ಪ್ರಕಟಿಸಿದೆ.

ದುಬೈ ಏರ್ ಪೋರ್ಟ್ ಬಳಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ತಂಡಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. ಆದರೆ ಇಂಧನ ಟ್ಯಾಂಕ್ ಗೆ ಬೆಂಕಿ ಬಿದ್ದಿರುವುದರಿಂದ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ದುರಂತದಲ್ಲಿ ಯಾವುದೇ ಜೀವಹಾನಿಯಾದ ಬಗ್ಗೆ ಈವರೆಗೆ ವರದಿಯಾಗಿಲ್ಲ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular