HomeIndiaಮತ್ತೊಂದು ಶಾಕಿಂಗ್‌ ಘಟನೆ ಬಹಿರಂಗ; ವಿಮಾನದಲ್ಲಿ ವಾಂತಿ ಮಾಡಿ, ಶೌಚಾಲಯದ ಸುತ್ತಲೂ ಮಲ ವಿಸರ್ಜಿಸಿದ ಪ್ರಯಾಣಿಕ

ಮತ್ತೊಂದು ಶಾಕಿಂಗ್‌ ಘಟನೆ ಬಹಿರಂಗ; ವಿಮಾನದಲ್ಲಿ ವಾಂತಿ ಮಾಡಿ, ಶೌಚಾಲಯದ ಸುತ್ತಲೂ ಮಲ ವಿಸರ್ಜಿಸಿದ ಪ್ರಯಾಣಿಕ

ವಿಮಾನದಲ್ಲಿ ಪ್ರಯಾಣಿಕರ ದುರ್ವರ್ತನೆ ಮತ್ತು ಕುಡಿದು ಅಸಭ್ಯವಾಗಿ ವರ್ತಿಸುವ ಘಟನೆಗಳು ನಿರಂತರವಾಗಿ ವರದಿಯಾಗ್ತಿದ್ದು ಇಂತಹ ಪ್ರಕರಣಗಳಿಗೆ ಮತ್ತೊಂದು ಘಟನೆ ಸೇರ್ಪೆಡೆಯಾಗಿ ಈಗ ಬೆಳಕಿಗೆ ಬಂದಿದೆ.

ಗುವಾಹಟಿಯಿಂದ ದೆಹಲಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕುಡಿದ ಪ್ರಯಾಣಿಕನೊಬ್ಬ ವಾಂತಿ ಮಾಡಿದ್ದಾನೆ. ಇಷ್ಟೇ ಅಲ್ಲದೇ ವಿಮಾನದ ಶೌಚಾಲಯದ ಸುತ್ತಲೂ ಮಲ ವಿಸರ್ಜನೆ ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರ್ಚ್ 26 ರಂದು ಇಂಡಿಗೋ ಫ್ಲೈಟ್ 6E 762 ನಲ್ಲಿ ಪ್ರಯಾಣಿಕನ ಇಂತಹ ಅಸಭ್ಯ ವರ್ತನೆಯ ನಂತರ ವಿಮಾನದಲ್ಲಿದ್ದ ಗಗನಸಖಿಯರು ಅದನ್ನು ಸ್ವಚ್ಛಗೊಳಿಸಬೇಕಾಯಿತು.

ಈ ಘಟನೆಯನ್ನು ವಿಮಾನದಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹೈಲೈಟ್ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕಾಗಿ ವಿಮಾನ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

ಇಂಡಿಗೋ ಏರ್‌ಲೈನ್ಸ್ ಕುಡಿದ ಪ್ರಯಾಣಿಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular