HomeKarnatakaBIG NEWS: ಡ್ರಗ್ ಪೆಡ್ಲರ್ ಜೊತೆ ಮತ್ತೆ ಕಿರುತೆರೆ-ಚಲನಚಿತ್ರ ನಟ-ನಟಿಯರ ನಂಟು; ಸ್ಫೋಟಕ ಮಾಹಿತಿ ಬಹಿರಂಗ

BIG NEWS: ಡ್ರಗ್ ಪೆಡ್ಲರ್ ಜೊತೆ ಮತ್ತೆ ಕಿರುತೆರೆ-ಚಲನಚಿತ್ರ ನಟ-ನಟಿಯರ ನಂಟು; ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಡ್ರಗ್ಸ್ ಪೆಡ್ಲರ್ ಗಳ ಜೊತೆ ಕಿರುತೆರೆಯ ನಟ-ನಟಿಯರು, ಚಲನಚಿತ್ರರಂಗದ ನಟ-ನಟಿಯರು ನಂಟು ಹೊಂದಿರುವ ಬಗ್ಗೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

ಇತ್ತೀಚೆಗೆ ಬಂಧಿಸಲ್ಪಟ್ಟಿದ್ದ ಡ್ರಗ್ಸ್ ಪೆಡ್ಲರ್ ಗಳ ವಿಚಾರಣೆ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ಡ್ರಗ್ಸ್ ಕೇಸ್ ನಲ್ಲಿ ಈ ಹಿಂದೆ ಸ್ಯಾಂಡಲ್ ವುಡ್ ನಟ-ನಟಿಯರ ಹೆಸರು ಕೇಳಿಬಂದಿತ್ತು. ಈ ವೇಳೆ ಕೆಲ ನಟ ನಟಿಯರನ್ನು ವಿಚಾರಣೆ ನಡೆಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಈಗ ಮತ್ತೆ ಡ್ರಗ್ಸ್ ಕೇಸ್ ನಲ್ಲಿ ಸ್ಯಾಂಡಲ್ ವುಡ್ ನಟ-ನಟಿಯರ ಹೆಸರು ಕೇಳಿಬಂದಿದೆ. ಪೆಡ್ಲರ್ ಮೊಬೈಲ್ ಪರಿಶೀಲನೆ ವೇಳೆ ನಟ-ನಟಿಯರ ನಂಟು ಇರುವುದು ಬಯಲಾಗಿದೆ.

ಇತ್ತೀಚೆಗೆ ಸಿಸಿಬಿ ಪೊಲೀಸರು ರಾಮಮೂರ್ತಿ ನಗರದ ಮನೆಯಲ್ಲಿ ದಾಳಿ ನಡೆಸಿ 21 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದರು. ಪ್ರಕರಣದಲ್ಲಿ ವಿದೇಶಿ ಡ್ರಗ್ ಪೆಡ್ಲರ್ ಲಿಯೋನಾರ್ಡ್ ಎಂಬಾತನನ್ನು ಬಂಧಿಸಲಾಗಿತ್ತು. ಹೊಸ ವರ್ಷದ ಸಂದರ್ಭದಲ್ಲಿ ಡ್ರಗ್ಸ್ ಮಾರಲು ಆರೋಪಿ ಬೃಹತ್ ಪ್ರಮಾಣದಲ್ಲಿ ಡ್ರಗ್ಸ್ ಶೇಖರಿಸಿಟ್ಟಿದ್ದ.

For Latest News Updates, Join Our Whatsapp Community🚩
RELATED ARTICLES

Most Popular