ಮುಂಬೈ: ಮಲಾಡ್ ಪಶ್ಚಿಮದ ವಸತಿ ಸಂಕೀರ್ಣವೊಂದರಲ್ಲಿ ಆಘಾತಕಾರಿ ಘಟನೆ ವರದಿಯಾಗಿದ್ದು, ಚಾಲಕಿಯೊಬ್ಬಳು ಆಟವಾಡುತ್ತಿದ್ದ ಮಕ್ಕಳ ಮೇಲೆ ಕಾರು ಹರಿಸಿದ್ದಾಳೆ. ಆಕೆ ಉದ್ದೇಶಪೂರ್ವಕವಾಗಿ ಕಾರು ಹರಿಸಿದ್ದಾಳೆ ಎಂದು ಬಾಲಕರ ತಾಯಿ ಆರೋಪಿಸಿದ್ದಾರೆ.
ಘಟನೆಯಲ್ಲಿ 7 ವರ್ಷದ ಬಾಲಕನ ಕಾಲಿಗೆ ತೀವ್ರ ಗಾಯಗಳಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆ ಅಕ್ಟೋಬರ್ 19 ರಂದು ಸಂಜೆ 5:30 ರ ಸುಮಾರಿಗೆ ಇನ್ಫಿನಿಟಿ ಮಾಲ್ನ ಹಿಂಭಾಗದ ಇಂಟರ್ಫೇಸ್ ಹೈಟ್ಸ್ನಲ್ಲಿ ನಡೆದಿದೆ.
ಘಟನೆಯ ನಂತರ, ಬಂಗೂರ್ ನಗರ ಪೊಲೀಸರು ಶ್ವೇತಾ ಶೆಟ್ಟಿ-ರಾಥೋಡ್ ಎಂದು ಗುರುತಿಸಲಾದ ಚಾಲಕಿ ವಿರುದ್ಧ ಅತಿವೇಗದ ಚಾಲನೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಘಟನೆಯ ನಂತರ ಕಾರಿನಿಂದ ಇಳಿದ ಚಾಲಕಿ ಮಕ್ಕಳನ್ನು ಉಪಚರಿಸಿದ್ದಾರೆ.
#WATCH | #Mumbai: Woman Runs Car Over 7-Year-Old Twins In Malad Society; One Seriously Injured, CCTV Captures Incident #MumbaiNews #Maharashtra pic.twitter.com/DPgOtH4r4s
— Free Press Journal (@fpjindia) October 22, 2025
