ಹಾವೇರಿ : ಶಾಲಾ ಬಸ್ ಚಾಲನೆ ವೇಳೆ ಹೃದಯಾಘಾತದಿಂದ ಚಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಕಳಲಗೊಂಡ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಪಕ್ಕಿರೇಶ ಮಲ್ಲೇಶಣ್ಣನವರ್ (25) ಎಂದು ಗುರುತಿಸಲಾಗಿದೆ. ಶಾಲೆಯ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಪಕ್ಕಿರೇಶ ಸಂಜೆ ಶಾಲೆಯಿಂದ ಮಕ್ಕಳನ್ನ ಮನೆಗೆ ಬಿಡುವ ವೇಳೆ ಧಿಡೀರ್ ಆಗಿ ಹೃದಯಾಘಾತ ಕಾಣಿಸಿಕೊಂಡಿದೆ. ಕೂಡಲೇ ಅವರು ರಸ್ತೆ ಬದಿ ಬಸ್ ನಿಲ್ಲಿಸಿದ್ದಾರೆ. ನಂತರ ಮಕ್ಕಳ ಚೀರಾಟ ಕೇಳಿ ಸ್ಥಳೀಯರು ಬಂದು ಚಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲೇ ಚಾಲಕ ಮೃತಪಟ್ಟಿದ್ದಾರೆ.

