HomeKarnatakaBIG NEWS: ಬಿಜೆಪಿ ಬೆಳಗಾವಿ ಚಲೋಗೆ ಅನುಮತಿ ಇಲ್ಲ: ಗೃಹ ಸಚಿವ ಡಾ.ಜಿ. ಪರಮೇಶ್ವರ್

BIG NEWS: ಬಿಜೆಪಿ ಬೆಳಗಾವಿ ಚಲೋಗೆ ಅನುಮತಿ ಇಲ್ಲ: ಗೃಹ ಸಚಿವ ಡಾ.ಜಿ. ಪರಮೇಶ್ವರ್

ಬೆಂಗಳೂರು: ಎಂಎಲ್ ಸಿ ಸಿ.ಟಿ. ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಬೆಳಗಾವಿ ಚಲೋ ಹೋರಾಟಕ್ಕೆ ಮುಂದಾಗಿದೆ. ಆದರೆ ಬಿಜೆಪಿಯ ಬೆಳಗಾವಿ ಚಲೋಗೆ ಅನುಮತಿ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಬಿಜೆಪಿಯವರ ಬೆಳಗಾವಿ ಚಲೋಗೆ ಪರ್ಮಿಷನ್ ಕೊಡಲ್ಲ. ಅದಕ್ಕೂ ಮೀರಿ ಅವರು ಮಾಡಿದರೆ ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಾವು ಕಾನೂನು ವ್ಯವಸ್ಥೆ ಸರಿ ಮಾಡುತ್ತೇವೆ. ಬಿಜೆಪಿ ಚಲೋಗೆ ಯಾವುದೇ ರೀತಿ ಅವಕಾಶವಿಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ವಿಧಾನಪರಿಷತ್ ಕಲಾಪದ ವೇಳೆ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಆಡಿಯೋ, ವಿಡಿಯೋ ಪರಿಶೀಲಿಸಿ, ಎಫ್ ಎಸ್ ಎಲ್ ಗೆ ಕಳುಹಿಸುವ ಬಗ್ಗೆ ಪರಿಶೀಲಿಸುತ್ತೇವೆ. ಸಭಾಪತಿಯವರು ಮಾಧ್ಯಮಗಳಲ್ಲಿ ಬಂದ ಬಗ್ಗೆ ಪರಿಸೀಲಿಸುತ್ತಾರೆ. ಪೊಲೀಸರು ನಿಯಮಗಳ ಪ್ರಕಾರವೇ ಕೆಲಸ ಮಾಡುತ್ತಾರೆ ಎಂದು ಹೇಳಿದರು.

 

For Latest News Updates, Join Our Whatsapp Community🚩
RELATED ARTICLES

Most Popular