HomeKarnatakaBREAKING NEWS: ಕಪ್ಪಗಿದ್ದಾಳೆ ಎಂದು ಪತ್ನಿಗೆ ಚಿತ್ರಹಿಂಸೆ: ಪತಿ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

BREAKING NEWS: ಕಪ್ಪಗಿದ್ದಾಳೆ ಎಂದು ಪತ್ನಿಗೆ ಚಿತ್ರಹಿಂಸೆ: ಪತಿ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

ಚಿಕ್ಕಬಳ್ಳಾಪುರ: ಪತ್ನಿ ಕಪ್ಪಗಿದ್ದಾಳೆ ಎಂದು ಆಕೆಗೆ ಅವಮಾನ ಮಾಡಿ ಹಿಂಸಿದ್ದೂ ಅಲ್ಲದೇ, ವರದಕ್ಷಿಣೆ ಕಿರುಕುಳ ನೀಡಿತ್ತಿದ್ದ ಪತಿ ಹಾಗೂ ಆತನ ಕುಟುಂಬದ ಚಿತ್ರಹಿಂಸೆಗೆ ಮನನೊಂದು ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ.

22 ವರ್ಷದ ಬಿಂದುಶ್ರೀ ಆತ್ಮಹತ್ಯೆಗೆ ಶರಣಾದ ಮಹಿಳೆ. ಕೆಲ ತಿಂಗಳ ಹಿಂದಷ್ಟೇ ಬಿಂದುಶ್ರೀಯನ್ನು ರಾಘವೇಂದ್ರ ಎಂಬಾತನ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಬಿಂದುಶ್ರೀಗೆ ನೀನು ಕಪ್ಪಗಿದ್ದೀಯಾ ಎಂದು ಪತಿ ಅವಮಾನಿಸುತ್ತಿದ್ದ. ಅಲ್ಲದೇ 20 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಪತಿಯ ತಂದೆ-ತಾಯಿ ಕೂಡ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದರಿಂದ ಮನನೊಂದ ಬಿಂದುಶ್ರೀ ತವರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಿಂದುಶ್ರೀ ಪತಿ ರಾಘವೇಂದ್ರ, ಅತ್ತೆ ಲತಾ, ಮಾವ ನರಸಿಂಹಯ್ಯ ವಿರುದ್ಧ ಬಿಂದುಶ್ರೀ ಪೋಷಕರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular