HomeKarnatakaBIG NEWS: ವರದಕ್ಷಿಣೆ ಕಿರುಕುಳಕ್ಕೆ ಮಗಳ ಸಾವು: ವಿಷಯ ಕೇಳಿ ನೊಂದ ತಂದೆ ಆತ್ಮಹತ್ಯೆಗೆ ಯತ್ನ:...

BIG NEWS: ವರದಕ್ಷಿಣೆ ಕಿರುಕುಳಕ್ಕೆ ಮಗಳ ಸಾವು: ವಿಷಯ ಕೇಳಿ ನೊಂದ ತಂದೆ ಆತ್ಮಹತ್ಯೆಗೆ ಯತ್ನ: ತಾಯಿಗೂ ಆಘಾತ

ಚಿಕ್ಕಬಳ್ಳಾಪುರ: ಪತಿಯ ಮನೆಯವರ ಅವಮಾನ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿ ನೊಂದ ತಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ.

ಕೆ.ಬಿ.ದೇವರಾಜ್ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥರಾಗಿರುವ ಅವರನ್ನು ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಬಿ.ದೇವರಾಜ್ ಮಗಳು ಬಿಂದುಶ್ರೀ ಪತಿ ಹಾಗೂ ಕುಟುಂಬದವರ ಕಿರುಕುಳಕ್ಕೆ ನೊಂದು ನೇಣಿಗೆ ಶರಣಾಗಿದ್ದಳು. ಇದರಿಂದ ನೊಂದ ಕೆ.ಬಿ.ದೇವರಾಜ್ ತಾವೂ ಸಾವಿಗೆ ಶರಣಾಗಲು ಯತ್ನಿಸಿದ್ದಾರೆ. ಪತಿ ದೇವರಾಜ್ ನಿರ್ಧಾರ ಕಂಡು ಅವರ ಪತ್ನಿಗೂ ಆಘಾತವಾಗಿ ಅಸ್ವಸ್ಥಗೊಂಡಿದ್ದಾರೆ.

ಬಿಂದುಶ್ರೀಯನ್ನು 7 ತಿಂಗಳ ಹಿಂದಷ್ಟೇ ರಾಘವೇಂದ್ರ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಬಿಂದುಶ್ರೀ ಕಪ್ಪಗಿದ್ದಾಳೆ ಎಂದು ಅವಮಾನಿಸುತ್ತಿದ್ದ ರಾಘವೇಂದ್ರ ಬರಬರುತ್ತಾ 20 ಲಕ್ಷ ವರದಕ್ಷಿಣೆ ತರುವಂತೆ ಹಿಂಸಿಸತೊಡಗಿದ್ದ. ಪತಿಯ ಕಾಟಕ್ಕೆ ಅತ್ತೆ-ಮಾವ ಕೂಡ ಸಾಥ್ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತಿಯ ಕಿರುಕುಳ, ವರದಕ್ಷಿಣೆಗಾಗಿ ಹಿಂಸೆಗೆ ಬೇಸತ್ತ ಬಿಂದುಶ್ರೀ ತವರಿಗೆ ಬಂದಿದ್ದಳು. ಅಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾಳೆ. ಮಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆ ನೊಂದ ಕೆ.ಬಿ.ದೇವರಾಜ್ ತಾವೂ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿಂದುಶ್ರೀ ಪತಿ ರಾಘವೇಂದ್ರ ಹಾಗೂ ಅತ್ತೆ-ಮಾವನ ವಿರುದ್ಧ ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

For Latest News Updates, Join Our Whatsapp Community🚩
RELATED ARTICLES

Most Popular