ಬೆಳಗಿನ ʼವಾಕಿಂಗ್ʼ ವೇಳೆ ಮಾಡಬೇಡಿ ಈ ತಪ್ಪು

ಫಿಟ್ನೆಸ್ ಕಾಯ್ದುಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಉತ್ತಮ ಆಹಾರದಿಂದ ಹಿಡಿದು ವ್ಯಾಯಾಮದವರೆಗೆ ಎಲ್ಲವೂ ಫಿಟ್ನೆಸ್ ಗೆ ಸಹಕಾರಿ. ಬೆಳಿಗ್ಗಿನ ವಾಕ್ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜಿಮ್, ಯೋಗಕ್ಕಿಂತ ವಾಕಿಂಗ್ ಬೆಸ್ಟ್ ಎನ್ನುವವರಿದ್ದಾರೆ. ಆದ್ರೆ ಈ ವಾಕ್ ವೇಳೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ನಮ್ಮ ಆರೋಗ್ಯವನ್ನು ಸುಧಾರಿಸುವ ಬದಲು ಹಾಳು ಮಾಡುತ್ತವೆ.

ವಾಕಿಂಗ್ ಮಾಡಲು ವಾಹನ ಓಡಾಡದ ಹಾಗೂ ಹಸಿರು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು. ಅನೇಕರು ತಡವಾಗಿ ಏಳ್ತಾರೆ. ಪಾರ್ಕ್ ಗೆ ಹೋಗಲು ಸಮಯವಿರುವುದಿಲ್ಲ. ರಸ್ತೆಯಲ್ಲಿಯೇ ವಾಕಿಂಗ್ ಮಾಡಿ ಬರ್ತಾರೆ. ಆದ್ರೆ ವಾಹನದ ಹೊಗೆ ಬೆಳ್ಳಂಬೆಳಿಗ್ಗೆ ನಮ್ಮ ದೇಹ ಸೇರುವುದ್ರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗುತ್ತದೆ.

ಸೂರ್ಯೋದಯಕ್ಕಿಂತ ಮೊದಲು ಮಾಡುವ ವಾಕಿಂಗ್ ಹೆಚ್ಚು ಪ್ರಯೋಜನಕಾರಿ. ಯಾಕೆಂದ್ರೆ ಈ ವೇಳೆ ಮಾಲಿನ್ಯ ಕಡಿಮೆಯಿರುತ್ತದೆ. ಬೆಳಿಗ್ಗೆ ಬೇಗ ಏದ್ದು ವಾಕಿಂಗ್ ಗೆ ಹೋಗ ಬಯಸುವವರು ರಾತ್ರಿ ಬೇಗ ಮಲಗಬೇಕು. ಪ್ರತಿದಿನ ಮಲಗುವ ಹಾಗೂ ಏಳುವ ಸಮಯ ಸರಿಯಾಗಿದ್ದಲ್ಲಿ ನಿದ್ರೆ ಸರಿಯಾಗಿ ಬರುತ್ತದೆ.

ವಾಕಿಂಗ್ ಗೆ ಸೂಕ್ತ ಬಟ್ಟೆ ಹಾಗೂ ಬೂಟ್ ಆಯ್ಕೆ ಮಾಡಿಕೊಳ್ಳಿ. ವಾಕಿಂಗ್ ಮಾಡುವ ವೇಳೆ ಕಿರಿಕಿರಿ ಎನ್ನಿಸುವ ಬಟ್ಟೆ ತೊಡಬೇಡಿ. ಇದ್ರ ಜೊತೆಗೆ ಕೇವಲ ವಾಕಿಂಗ್ ಗಾಗಿಯೇ ಶೂ ಒಂದನ್ನು ಮೀಸಲಿಡಿ.

ಕೆಲವರು ವಾಕಿಂಗ್ ಮಧ್ಯೆಯೇ ನೀರು ಕುಡಿಯುತ್ತಾರೆ. ಇದು ತಪ್ಪು ವಿಧಾನ. ವಾಕಿಂಗ್ ಗೆ ಹೋಗುವ ಮುನ್ನ 2-3 ಗ್ಲಾಸ್ ನೀರು ಕುಡಿಯಿರಿ. ವಾಕಿಂಗ್ ಮುಗಿದ ನಂತ್ರ ಸ್ವಲ್ಪ ಸಮಯ ಬಿಟ್ಟು ನೀರು ಕುಡಿಯುವುದು ಸರಿಯಾದ ವಿಧಾನ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read