HomeBusinessಡಾಲರ್ ಕುಸಿತದ ಮುನ್ಸೂಚನೆ ನೀಡಿದ ಪೀಟರ್ ಸ್ಕಿಫ್: ಚಿನ್ನದ ಬೆಲೆ ಮೇಲೆ ಇದರ ಎಫೆಕ್ಟ್ ಏನು

ಡಾಲರ್ ಕುಸಿತದ ಮುನ್ಸೂಚನೆ ನೀಡಿದ ಪೀಟರ್ ಸ್ಕಿಫ್: ಚಿನ್ನದ ಬೆಲೆ ಮೇಲೆ ಇದರ ಎಫೆಕ್ಟ್ ಏನು

ಬೆಂಗಳೂರು: ನೀವು ಚಿನ್ನದ ಬೆಲೆ ಸ್ವಲ್ಪ ಇಳಿದ ತಕ್ಷಣ ಅಬ್ಬಾ ಬಂಗಾರ ಕೊಳ್ಳೋಕೆ ಒಳ್ಳೆ ಟೈಮ್ ಬಂತು ಅಂತ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ಒಂದು ನಿಮಿಷ ನಿಲ್ಲಿ ಯಾಕಂದ್ರೆ ಜಗತ್ತಿನ ಖ್ಯಾತ ಅರ್ಥಶಾಸ್ತ್ರಜ್ಞ ಪೀಟರ್ ಸ್ಕಿಫ್ ಅಮೆರಿಕದ ಡಾಲರ್ ಮತ್ತು ಜಾಗತಿಕ ಆರ್ಥಿಕತೆಯ ಬಗ್ಗೆ ಅಕ್ಷರಶಃ ಬಾಂಬ್ ಸಿಡಿಸಿದ್ದಾರೆ. ಇವರು ಹೇಳ್ತಿರೋದು ಕೇಳಿದ್ರೆ ನಿಮ್ಮ ಕೈಲಿರೋ ಕರೆನ್ಸಿ ನೋಟುಗಳ ಮೇಲೆ ನಿಮಗಿರೋ ನಂಬಿಕೆಯೇ ಹೊರಟುಹೋಗಬಹುದು

ಯಾರು ಈ ಪೀಟರ್ ಸ್ಕಿಫ್?
ಇವರು ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞ, ಫಂಡ್ ಮ್ಯಾನೇಜರ್ ಮತ್ತು ‘ಯೂರೋ ಪೆಸಿಫಿಕ್ ಅಸೆಟ್ ಮ್ಯಾನೇಜ್‌ಮೆಂಟ್’ ಸಂಸ್ಥೆಯ ಸ್ಥಾಪಕರು.

2008ರ ಅಮೆರಿಕದ ವಸತಿ ಮಾರುಕಟ್ಟೆ ಬುದ್ಬುದ (Housing Bubble) ಮತ್ತು ಆರ್ಥಿಕ ಕುಸಿತವನ್ನು ಮೊದಲೇ ನಿಖರವಾಗಿ ಊಹಿಸಿದ್ದಕ್ಕಾಗಿ ಇವರು ಜಾಗತಿಕವಾಗಿ ಪ್ರಸಿದ್ಧರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವರು ಫಿಯೆಟ್ ಕರೆನ್ಸಿ (ಸರ್ಕಾರಿ ಕರೆನ್ಸಿ) ಮತ್ತು ಸೆಂಟ್ರಲ್ ಬ್ಯಾಂಕಿಂಗ್ ವ್ಯವಸ್ಥೆಯ ಕಟು ಟೀಕಾಕಾರರು. ಹಣದುಬ್ಬರದಿಂದ ರಕ್ಷಣೆ ಪಡೆಯಲು ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುವುದನ್ನು ಇವರು ಸದಾ ಪ್ರತಿಪಾದಿಸುತ್ತಾರೆ

ಪೀಟರ್ ಸ್ಕಿಫ್ ಬಿಚ್ಚಿಟ್ಟ ಸ್ಫೋಟಕ ಸತ್ಯಗಳು

2008ರ ಬಿಕ್ಕಟ್ಟು ಒಂದು ಪಿಕ್ನಿಕ್ ಅಷ್ಟೇ: 2008ರಲ್ಲಿ ಇಡೀ ಪ್ರಪಂಚವೇ ನಲುಗಿಹೋಗಿತ್ತು ನೆನಪಿದೆಯೇ? ಸ್ಕಿಫ್ ಪ್ರಕಾರ, ಮುಂದೆ ಬರಲಿರುವ ಆರ್ಥಿಕ ಬಿಕ್ಕಟ್ಟು ಅದರ ಹತ್ತು ಪಟ್ಟು ಭೀಕರವಾಗಿರಲಿದೆ. 2008ರ ಬಿಕ್ಕಟ್ಟು ಈ ಬಿಕ್ಕಟ್ಟಿನ ಮುಂದೆ ಸಣ್ಣ ಪಿಕ್ನಿಕ್‌ನಂತೆ ಕಾಣಲಿದೆ ಅನ್ನೋದು ಅವರ ಖಡಕ್ ವಾರ್ನಿಂಗ್.

ಸದ್ಯಕ್ಕೆ ಪ್ರಪಂಚ ಆಳುತ್ತಿರುವ ಅಮೆರಿಕನ್ ಡಾಲರ್ ಶೀಘ್ರದಲ್ಲೇ ಮಣ್ಣುಮುಕ್ಕಲಿದೆ. ಡಾಲರ್ ಜಾಗಕ್ಕೆ ಮತ್ತೆ ಬಂಗಾರವೇ ಅಧಿಪತಿಯಾಗಿ ಬರಲಿದೆ.

ಈ ಬಾರಿ ಬಿಕ್ಕಟ್ಟು ಇಡೀ ಪ್ರಪಂಚಕ್ಕಲ್ಲ ಬದಲಾಗಿ ಅಮೆರಿಕದ ಒಳಗಿನ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ

ನಮಗೆ ತಿಳಿಯದಂತೆ ದೊಡ್ಡ ದೊಡ್ಡ ದೇಶಗಳ ಬ್ಯಾಂಕುಗಳು ಈಗ ಮಾಸ್ಟರ್ ಪ್ಲಾನ್ ಮಾಡುತ್ತಿವೆ. ಚೀನಾ, ರಷ್ಯಾ ಮತ್ತು ಇತರ ದೇಶಗಳು ಅಮೆರಿಕದ ಖಜಾನೆ ಬಾಂಡ್‌ಗಳನ್ನು ನಂಬುವುದನ್ನು ಬಿಟ್ಟು, ಟನ್ ಗಟ್ಟಲೆ ಚಿನ್ನವನ್ನು ಖರೀದಿಸಿ ತಮ್ಮ ಸೇಫ್ ಲಾಕರ್‌ಗಳಲ್ಲಿ ತುಂಬಿಸಿಕೊಳ್ಳುತ್ತಿವೆ. ಅಮೆರಿಕದ ಮೇಲಿನ ನಂಬಿಕೆ ಮುಗಿಯಿತು ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ಸ್ಕಿಫ್ ಪ್ರಶ್ನಿಸಿದ್ದಾರೆ.

ಫೆಬ್ರವರಿ 5 ರಂದು ಚಿನ್ನ 3.6% ($4,805) ಮತ್ತು ಬೆಳ್ಳಿ 16% ($73.4) ನಷ್ಟು ಕುಸಿದಿದ್ದನ್ನು ಕಂಡು ಹೂಡಿಕೆದಾರರು ಕಂಗಾಲಾಗಿದ್ದಾರೆ. ಆದರೆ ಸ್ಕಿಫ್ ಪ್ರಕಾರ ಇದೊಂದು ಟ್ರಾಪ್’:

ಪ್ರಾಫಿಟ್ ಬುಕ್ಕಿಂಗ್: ಬೆಲೆ ಗಗನಕ್ಕೇರಿದಾಗ ದೊಡ್ಡ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮಾರಾಟ ಮಾಡುತ್ತಿದ್ದಾರೆ.

ಅಮೆರಿಕ-ಇರಾನ್ ನಡುವಿನ ಯುದ್ಧದ ಭೀತಿ ಸ್ವಲ್ಪ ಕಮ್ಮಿ ಆಗಿರೋದಕ್ಕೆ ರೇಟ್ ಇಳಿದಿದೆ.

ಇವರು ಸುಮ್ಮನೆ ಜ್ಯೋತಿಷ್ಯ ಹೇಳುವವರಲ್ಲ 2008ರ ಅಮೆರಿಕದ ರಿಯಲ್ ಎಸ್ಟೇಟ್ ಕುಸಿತವನ್ನು ಇವರು ಮೊದಲೇ ನಿಖರವಾಗಿ ಊಹಿಸಿದ್ದರು. ಆಗ ಇವರನ್ನು ನೋಡಿ ನಕ್ಕವರೆಲ್ಲ ನಂತರ ಬೀದಿಗೆ ಬಂದಿದ್ದರು. ಈಗಲೂ ಅವರು ಹೇಳ್ತಿರೋದು ಒಂದೇ ಕಾಗದದ ನೋಟುಗಳನ್ನು ನಂಬಬೇಡಿ ಚಿನ್ನದ ಮೇಲೆ ಹೂಡಿಕೆ ಮಾಡಿ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular