ಯಾವ ಜೀವಿಗಳು ತಮ್ಮ ಸುತ್ತಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತವೋ ಅವು ಬದುಕುಳಿಯುವ ಹಾಗೂ ತಮ್ಮ ಸಂತತಿಯನ್ನು ಉಳಿಸಿಕೊಳ್ಳುವ ಅತ್ಯುತ್ತಮ ಸಾಧ್ಯತೆಗಳನ್ನು ಹೊಂದಿರುತ್ತವೆ ಎಂದು ಚಾರ್ಲ್ಸ್ ಡಾರ್ವಿನ್ ಹೇಳಿರುವ ಮಾತುಗಳನ್ನು ನೆನಪಿಸುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ.
ಚಿರತೆಗಳು ನಾಯಿಗಳನ್ನು ಬೇಟೆಯಾಡುವ ಅನೇಕ ವಿಡಿಯೋಗಳನ್ನೂ ಕಂಡಿದ್ದೇವೆ. ಆದರೆ ಜೀವ ಉಳಿಸಿಕೊಳ್ಳಲು ನಾಯಿ ಹಾಗೂ ಚಿರತೆಗಳು ಒಟ್ಟಿಗೇ ಹೋರಾಟ ಮಾಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುರೇಂದರ್ ಮಹ್ರಾ ಶೇರ್ ಮಾಡಿದ್ದಾರೆ.
ನೀರಿನ ಟ್ಯಾಂಕ್ ಒಂದರಲ್ಲಿ ಬಿದ್ದಿರುವಂತೆ ಕಾಣುವ ಚಿರತೆ ಹಾಗೂ ನಾಯಿಗಳು ಪ್ರಾಣಭಯದಿಂದಾಗಿ ತಂತಮ್ಮ ಸ್ವಭಾವಗಳನ್ನು ಮರೆತು ಒಂದಕ್ಕೊಂದು ಹತ್ತಿರದಲ್ಲೇ ಕುಳಿತಿವೆ. ನಾಯಿಯು ಚಿರತೆಯ ಬೆನ್ನೇರಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಎರಡೂ ಪ್ರಾಣಿಗಳೂ ಸರಕ್ಷಿತವಾಗಿ ಹೊರಗೆ ಬಂದಿವೆ ಎಂದು ಮೆಹ್ರಾ ತಿಳಿಸಿದ್ದಾರೆ.
https://twitter.com/surenmehra/status/1643826891147866113?ref_src=twsrc%5Etfw%7Ctwcamp%5Etweetembed%7Ctwterm%5E1643826891147866113%7Ctwgr%5Ecb5c27a8bbdc706e350fb03dc07ad74bfc396bdf%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdog-climbs-up-on-leopards-back-as-they-both-struggle-for-their-lives-watch-video-2356380-2023-04-06