HomeIndiaಗುದದ್ವಾರದಿಂದ ಕುಡುಕನ ಹೊಟ್ಟೆ ಸೇರಿದ ವೋಡ್ಕಾ ಬಾಟಲ್; ವೈದ್ಯರೇ ಶಾಕ್....!

ಗುದದ್ವಾರದಿಂದ ಕುಡುಕನ ಹೊಟ್ಟೆ ಸೇರಿದ ವೋಡ್ಕಾ ಬಾಟಲ್; ವೈದ್ಯರೇ ಶಾಕ್….!

ಕಠ್ಮಂಡು: ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ಮದ್ಯಪಾನ ಮಾಡುವುದರ ಜೊತೆಗೆ ಮದ್ಯದ ಬಾಟಲನ್ನೂ ಹೊಟ್ಟೆಯೊಳಗೆ ಇಳಿಸಿಕೊಂಡಿದ್ದಾನೆ ! ಗೆಳೆಯರ ಜೊತೆ ಸೇರಿ ಪಾರ್ಟಿ ಮಾಡಿದ ಆಸಾಮಿಯೊಬ್ಬನ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡ ಆತನ ಹೊಟ್ಟೆಯಿಂದ ವೋಡ್ಕಾ ಬಾಟಲಿಯನ್ನು ತೆಗೆದಿದ್ದಾರೆ.

ಪಾರ್ಟಿ ಮಾಡಿದ ಮರುದಿನದಿಂದ ಹೊಟ್ಟೆ ನೋವಿನಿಂದ ಕಂಗೆಟ್ಟಿದ್ದ ಕುಡುಕನಿಗೆ ಒಂದೆರೆಡು ದಿನದಲ್ಲಿ ಮುಖ, ಹೊಟ್ಟೆ ಊದಿಕೊಳ್ಳಲು ಆರಂಭಿಸಿದೆ. ಅನಿವಾರ್ಯವಾಗಿ ಆಸ್ಪತ್ರೆge ದಾಖಲಾದ. ಈತನ ತಪಾಸಣೆ ಮಾಡಿದಾಗ ಬಾಟಲಿ ಇರುವುದು ತಿಳಿದಿದೆ. ನೇಪಾಳದ ರೌಹತಾಹತ್ ಜಿಲ್ಲೆಯ ಗುಜಾರ ಮುನ್ಸಿಪಾಲಿಟಿ ವಲಯದಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

26 ವರ್ಷದ ನುರ್ಸಾದ್ ಮನ್ಸೂರಿ ತನ್ನ ಗೆಳೆಯರಾದ ಶೇಕ್ ಸಮೀಮ್ ಸೇರಿದಂತೆ ಹಲವರ ಜೊತೆ ಪಾರ್ಟಿ ಮಾಡಿದ್ದಾನೆ. ಕಂಠಪೂರ್ತಿ ಕುಡಿದ್ದಾನೆ.

ಮರದಿನವೇ ನುರ್ಸಾದ್ ಅಸ್ವಸ್ಥನಾಗಿದ್ದಾನೆ. ತೀವ್ರ ಹೊಟ್ಟೆನೋವಿನಿಂದ ಬಳಲಿದ್ದಾನೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 5 ದಿನಗಳ ಹಿಂದೆ ಆಸ್ಪತ್ರೆ ದಾಖಲಾದ ನುರ್ಸಾದ್ ಪರಿಶೀಲಿಸಿದ ವೈದ್ಯರಿಗೆ ಹೊಟ್ಟೆಯ ಕೆಳಭಾಗದಲ್ಲಿ ವಸ್ತು ಸೇರಿಕೊಂಡಿರುವುದು ಪತ್ತೆ ಹಚ್ಚಿದ್ದಾರೆ. ನಂತರ ಶಸ್ತ್ರಚಿಕಿತ್ಸೆ ಮಾಡಿದಾಗ ವೈದ್ಯರೇ ಶಾಕ್​ ಆಗಿದ್ದಾರೆ. ವೋಡ್ಕಾ ಮದ್ಯದ ಬಾಟಲಿಯನ್ನು ತೆಗೆಯಲಾಗಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಅಷ್ಟಕ್ಕೂ ಬಾಟಲಿ ಹೋದದ್ದು ಹೇಗೆಂದರೆ, ಈತನಿಗೆ ಕಂಠಪೂರ್ತಿ ಕುಡಿಸಿದ ಗೆಳೆಯರು, ವೋಡ್ಕಾ ಬಾಟಲಿಯನ್ನು ಗುದದ್ವಾರದ ಮೂಲಕ ತುರುಕಿದ್ದಾರೆ. ಅದೃಷ್ಟವಶಾತ್​ ಆತನ ಪ್ರಾಣಕ್ಕೆ ಹಾನಿಯಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular