HomeBeautyನೀವು ಚಳಿಗಾಲದಲ್ಲಿ ಮುಖ ತೊಳೆಯೋಕೆ ಬಿಸಿ ನೀರು ಬಳಸ್ತೀರಾ....?

ನೀವು ಚಳಿಗಾಲದಲ್ಲಿ ಮುಖ ತೊಳೆಯೋಕೆ ಬಿಸಿ ನೀರು ಬಳಸ್ತೀರಾ….?

ಚಳಿಗಾಲದಲ್ಲಿ. ತಣ್ಣನೆಯ ನೀರಿನಲ್ಲಿ ಕೈ ಹಾಕೋದು ಕಷ್ಟ. ನೀರು ಬಿಸಿಯಾಗಿದ್ರೆ ಹಿತವೆನಿಸುತ್ತದೆ. ಆದ್ರೆ ದೇಹಕ್ಕೆ ಹಿತವೆನಿಸುವ ಬಿಸಿ ನೀರು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮುಖ ತೊಳೆಯುವಾಗ ಎಂದೂ ಬಿಸಿ, ಬಿಸಿ ನೀರನ್ನು ಬಳಸಬಾರದು. ನೀರು ತುಂಬಾ ತಣ್ಣಗೂ ಇರಬಾರದು. ತುಂಬಾ ಬಿಸಿಯಾಗಿಯೂ ಇರಬಾರದು. ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದ್ರೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು.

 ಮುಖ ತೊಳೆಯುವಾಗ ಮುಖವನ್ನು ಸ್ಕ್ರಬ್ ಮಾಡ್ತಿರಿ ಎಂದಾದ್ರೆ ಮೃದು ಕೈಗಳಿಂದ ಸ್ಕ್ರಬ್ ಮಾಡಿ. ಒರಟಾದ ಕೈಗಳಿಂದ ಒರಟಾಗಿ ಮುಖವನ್ನು ತಿಕ್ಕಬೇಡಿ.

ಮುಖಕ್ಕೆ ಮೇಕಪ್ ಮಾಡಿಕೊಂಡಿದ್ದರೆ ಮೊದಲು ಕಾಟನ್ ಬಟ್ಟೆಯಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ. ನಂತ್ರ ಮುಖಕ್ಕೆ ನೀರು ಹಾಕಿ. ಮೇಕಪ್ ಇರುವಾಗ್ಲೆ ಮುಖಕ್ಕೆ ನೀರು ಹಾಕಿದ್ರೆ ಕೆಮಿಕಲ್ ಮುಖದ ಚರ್ಮ ಸೇರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಿನದಲ್ಲಿ ಎರಡು ಬಾರಿ ಮಾತ್ರ ಮುಖ ತೊಳೆಯಿರಿ. ಸೌಂದರ್ಯದ ಹೆಸರಿನಲ್ಲಿ ಪದೇ ಪದೇ ಮುಖ ತೊಳೆದ್ರೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ.

ಮುಖ ತೊಳೆಯುವ ಮೊದಲು ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಕೊಳಕು ಕೈನಲ್ಲಿ ಮುಖ ತೊಳೆದ್ರೆ ಮುಖಕ್ಕೆ ಹಾನಿಯಾಗುವ ಸಾಧ್ಯತೆಯಿರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular