HomeLatest Newsಮಕ್ಕಳಿಗೆ ದೇವರ ಹೆಸರನ್ನು ಇಡುವುದು ಯಾಕೆ ಗೊತ್ತಾ ? ಇದರ ಹಿಂದಿದೆ ಈ ಕಾರಣ

ಮಕ್ಕಳಿಗೆ ದೇವರ ಹೆಸರನ್ನು ಇಡುವುದು ಯಾಕೆ ಗೊತ್ತಾ ? ಇದರ ಹಿಂದಿದೆ ಈ ಕಾರಣ

ಮಗು ಹುಟ್ಟುವ ಸೂಚನೆ ಸಿಕ್ಕ ಕೂಡಲೇ ಹೆಣ್ಣಾದರೆ ಈ ಹೆಸರು, ಗಂಡಾದರೆ ಈ ಹೆಸರು ಇಡಬೇಕು ಎಂದು ಹುಡುಕಾಟ ಶುರು ಮಾಡುವುದು ಸಾಮಾನ್ಯ. ಇತ್ತೀಚೆಗಂತೂ ತಮ್ಮ ಮಗುವಿನ ಹೆಸರು ವಿಭಿನ್ನವಾಗಿ ಇರಬೇಕು ಎಂದು ಬಹಳ ಸಂಶೋಧನೆ ಮಾಡಿ ಹುಡುಕುವುದು ಉಂಟು.

ಈ ಹಿಂದೆ ಹೆಚ್ಚಾಗಿ ಹೆಣ್ಣೇ ಹುಟ್ಟಲಿ, ಗಂಡೇ ಹುಟ್ಟಲಿ ದೇವರ ಹೆಸರನ್ನೇ ಇಡುವುದು ಸಾಮಾನ್ಯವಾಗಿತ್ತು. ಅದರಲ್ಲೂ ಮನೆ ದೇವರ ಹೆಸರನ್ನು ಇಡುವುದು ಎಲ್ಲರ ಮನೆಯಲ್ಲೂ ವಾಡಿಕೆ. ಆದರೆ ಯಾಕೆ ಹೀಗೆ ಗೊತ್ತಾ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಕ್ಕಳು ಪಾದರಸದ ಹಾಗೆ. ಒಂದೆಡೆ, ಒಂದು ಕ್ಷಣ ಸುಮ್ಮನೆ ಕೂರುವವರಲ್ಲ. ಒಂದಲ್ಲ ಒಂದು ಕಾರಣಕ್ಕೆ ಪೋಷಕರು, ಸಂಬಂಧಿಕರು ಸೇರಿದ ಹಾಗೆ ಪ್ರತಿಯೊಬ್ಬರೂ ಮಗುವಿನ ಹೆಸರನ್ನು ಕೂಗುವುದರ ಮೂಲಕ ದೇವರ ನಾಮಸ್ಮರಣೆ ಮಾಡಿದ ಹಾಗೂ ಆಗುತ್ತದೆ ಎಂಬ ಸದುದ್ದೇಶ ಇದರ ಹಿಂದೆ ಇದೆ. ಇದಕ್ಕೆ ಪುಷ್ಟಿ ಕೊಡುವ ಹಾಗೆ ಪುರಾಣದಲ್ಲಿ ಒಂದು ಕಥೆಯೂ ಇದೆ. ಅಜಮಿಳ ಎಂಬ ಕೆಟ್ಟ ವ್ಯಕ್ತಿ, ಅವನ ಕೊನೆಗಾಲದಲ್ಲಿ ತನ್ನ ಕಿರಿಯ ಮಗ ನಾರಾಯಣನ ಹೆಸರು ಕೂಗಿದ ಮಾತ್ರಕ್ಕೆ ಅವನ ಪಾಪಗಳನ್ನು ಮನ್ನಿಸಿ, ಮೋಕ್ಷಕ್ಕೆ ಪಾತ್ರನಾದ ಕಥೆ ಹೆಚ್ಚು ಜನಜನಿತ.

ದೇವರ ಹೆಸರನ್ನು ಪ್ರತಿ ಸಂದರ್ಭದಲ್ಲೂ ಕರೆಯುವುದರಿಂದ ನಮ್ಮ ಕಷ್ಟಗಳು ಕಳೆದು, ತಪ್ಪಿನ ಪ್ರಾಯಶ್ಚಿತವೂ ಆಗುತ್ತದೆ ಎಂಬ ಉದ್ದೇಶ ಇದರ ಹಿಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular