ಕೋಪ ಕಂಟ್ರೋಲ್ ಮಾಡುವುದು ಹೇಗೆ ಗೊತ್ತಾ…..?

ಸಿಟ್ಟು. ಯಾರಿಗೆ ತಾನೇ ಬರಲ್ಲ? ಕೆಲವರು ಸಣ್ಣ ಪುಟ್ಟ ವಿಷಯಕ್ಕೂ ಅತಿಯಾಗಿ ಸಿಟ್ಟು ಮಾಡಿಕೊಂಡು ಸಂಬಂಧವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಹಾಗಾದರೆ ಸಿಟ್ಟು ಕಂಟ್ರೋಲ್ ಮಾಡಬೇಕಾದರೆ ಇವುಗಳನ್ನು ಮಾಡಿ ನೋಡಿ.
ಮಾತಾಡುವ ಮೊದಲು ಯೋಚಿಸಿ

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಅಂತಾರೆ. ಹಾಗಾಗಿ ಯಾರೊಂದಿಗೆ ಏನೇ ಮಾತನಾಡಬೇಕಾದರೂ ಯೋಚಿಸಿ ಮಾತನಾಡಿ. ಎಲ್ಲರೊಂದಿಗೂ ನಾನು ಹೀಗೇ ಮಾತನಾಡುವುದು ಎಂಬ ಉದ್ಧಟತನ ತೋರಬೇಡಿ. ಸಮಯ ಸಂದರ್ಭಕ್ಕೆ ತಕ್ಕಂತೆ ಮಾತು, ವರ್ತನೆ ಇರಲಿ.

ಮೌನವಾಗಿರಿ

ಕೋಪ ಬಂದಾಗ ಮೌನವಾಗಿರುವುದೇ ಒಳ್ಳೆಯದು. ಕೋಪದ ಭರದಲ್ಲಿ ಕೈಗೊಳ್ಳುವ ನಿರ್ಧಾರಗಳು ಯಾವತ್ತೂ ಸೂಕ್ತವಾಗಿರುವುದಿಲ್ಲ. ಹಾಗಾಗಿ ಮಾತನಾಡುವ ಬದಲು ಮೌನವಾಗಿದ್ದು, ನಂತರ ನಿಮಗೆ ಏಕೆ ಕೋಪ ಬಂದಿದೆ ಎಂಬುದನ್ನು ವಿಮರ್ಶಿಸಿ. ಸಾಧ್ಯವಾದರೆ ನಿಮ್ಮ ಕೋಪಕ್ಕೆ ಕಾರಣವಾದವರೊಂದಿಗೆ ಶಾಂತವಾದೊಡನೆ ಕಾರಣ ಚರ್ಚಿಸಿ.

ಹೊರಗೆ ಹೋಗಿ

ಕೋಪ ಬಂದ ತಕ್ಷಣ ಕೂಗಾಡುವ ವ್ಯಕ್ತಿಗಳು ನೀವಾಗಿದ್ದರೆ, ಆ ಸ್ಥಳದಿಂದ ಜಾಗ ಖಾಲಿ ಮಾಡುವುದು ಒಳ್ಳೆಯದು. ಆ ಸಂದರ್ಭದಲ್ಲಿ ಹೊರಗಡೆ ಒಂದು ವಾಕಿಂಗ್ ಹೋಗಿ. ಇದರಿಂದ ಮನಸ್ಸು ಸ್ವಲ್ಪ ಹಗುರವಾಗುತ್ತದೆ. ಹಾಗೆಯೇ ಕೋಪವೂ ಕರಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read