
ಮಾಡುವ ವಿಧಾನ: ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಮೊಸರು ಹಾಗೂ ಹಸಿ ಮೆಣಸನ್ನ ಹಾಕಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಿ. ಈ ಮಿಶ್ರಣವನ್ನ ಚೆನ್ನಾಗಿ ತೊಳೆದುಕೊಂಡ ಚಿಕನ್ ಪೀಸ್ಗಳ ಜೊತೆ ಸೇರಿಸಿ ಮ್ಯಾರಿನೇಟ್ ಮಾಡಿಡಿ. ಇದಾದ ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಚಕ್ಕೆ, ಏಲಕ್ಕಿ, ಈರುಳ್ಳಿ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ನ್ನು ಹಾಕಿ ಈರುಳ್ಳಿ ಹೊಂಬಣ್ಣ ಬರುವವರೆಗೂ ಹುರಿಯಿರಿ . ಇದಕ್ಕೆ ಇವಾಗ ಮ್ಯಾರಿನೇಟ್ ಮಾಡಿಟ್ಟ ಚಿಕನ್ ಹಾಗೂ ಕಾರದಪುಡಿ, ಗರಂ ಮಾಸಾಲಾ ಅರಿಶಿಣ, ಕಸೂರಿ ಮೇತಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪನ್ನ ಹಾಕಿ ಚಿಕನ್ ಪೀಸ್ಗಳು ಬೇಯುವರೆಗೂ ಒಲೆಯ ಮೇಲಿಡಿ.

