HomeLatest Newsನಿಮಗೆ ಈ ರೀತಿ ಕನಸು ಬೀಳುತ್ತಾ....?

ನಿಮಗೆ ಈ ರೀತಿ ಕನಸು ಬೀಳುತ್ತಾ….?

ಪ್ರತಿಯೊಂದು ಸ್ವಪ್ನಕ್ಕೂ ಒಂದೊಂದು ಅರ್ಥವಿರುತ್ತದೆ. ಕೆಲವೊಂದು ಸ್ವಪ್ನಗಳು ಮುಂದಾಗುವ ಬಗ್ಗೆ ಮುನ್ಸೂಚನೆ ನೀಡುತ್ತವೆ. ಸೆಕ್ಸ್ ಗೆ ಸಂಬಂಧಿಸಿದ ಸ್ವಪ್ನ ಕೂಡ ಆಗಾಗ ಬೀಳುತ್ತಿರುತ್ತದೆ. ಈ ಕನಸುಗಳು ಕೂಡ ವಾಸ್ತವತೆಯನ್ನು ಹೇಳುತ್ತವೆ.

ಸಹೋದ್ಯೋಗಿ ಜೊತೆ ಸಂಬಂಧ ಬೆಳೆಸಿದಂತೆ ಕಂಡ್ರೆ ನೀವು ಸಹೋದ್ಯೋಗಿಗೆ ಆಕರ್ಷಿತರಾಗಿದ್ದೀರಿ ಎಂದರ್ಥ. ಕೆಲವೊಮ್ಮೆ ಅವರ ಕೆಲ ಸ್ವಭಾವ ನಿಮಗೆ ಹತ್ತಿರವಾಗಿದ್ದು ನೀವೂ ಅದನ್ನು ಅಳವಡಿಸಿಕೊಳ್ಳುವ ಯತ್ನದಲ್ಲಿದ್ದೀರಿ ಎಂಬ ಅರ್ಥವನ್ನೂ ಈ ಕನಸು ಹೇಳುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನನಾಂಗದ ಬಗ್ಗೆ ವಿಚಿತ್ರ ಕನಸು ಕಂಡಲ್ಲಿ ಅದಕ್ಕೂ ಒಂದು ಅರ್ಥವಿದೆ. ಒಂದಕ್ಕಿಂತ ಹೆಚ್ಚು ಜನನಾಂಗವಿದ್ದಂತೆ ಕನಸು ಕಂಡಲ್ಲಿ ನೀವು ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೋ ಅಪರಾಧಕ್ಕೆ ಬಲಿಪಶುವಾಗಿದ್ದೀರಿ ಎಂದರ್ಥ.

ಸಂಗಾತಿ ನಿಮ್ಮ ಸ್ನೇಹಿತರ ಜೊತೆ ಸಂಬಂಧ ಬೆಳೆಸಿದಂತೆ ಕಂಡಲ್ಲಿ ಈ ಬಗ್ಗೆ ಆತುರದ ಅವಶ್ಯಕತೆಯಿಲ್ಲ. ಸ್ನೇಹಿತರಿಗೆ ಸಂಗಾತಿ ಆಕರ್ಷಿತರಾಗಿದ್ದಾರೆಂಬ ಅರ್ಥವನ್ನು ತಜ್ಞರು ಹೇಳುತ್ತಾರೆ. ಯಾಕೆ ಸಂಗಾತಿ ಸ್ನೇಹಿತರಿಗೆ ಆಕರ್ಷಿತರಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ. ಅದು ನಿಜವಾಗಿದ್ದರೆ ಸಂಗಾತಿಯಿಂದ ಸ್ನೇಹಿತರನ್ನು ದೂರವಿಡಿ.

ಸಮಲಿಂಗಕಾಮಿಗಳು ಕನಸಿನಲ್ಲಿ ಕಂಡ್ರೆ ನೀವು ಇದೇ ರೀತಿಯ ಆಸೆಯನ್ನು ಮುಚ್ಚಿಟ್ಟಿದ್ದೀರೆಂದು ಅರ್ಥ. ಕೆಲ ತಜ್ಞರ ಪ್ರಕಾರ ಸಮಲಿಂಗಿಗಳ ಪ್ರೇಮ ನೋಡಿ ಆಕರ್ಷಿತರಾಗಿದ್ದು, ತಾವೂ ಅದೇ ರೀತಿ ಇರಬೇಕೆಂದು ಬಯಸುವವರಿಗೆ ಇಂಥ ಕನಸು ಕಾಣುತ್ತದೆಯಂತೆ.

ಪ್ರಾಣಿಗಳ ಜೊತೆ ಸಂಬಂಧ ಬೆಳೆಸಿದಂತೆ ಕಂಡ್ರೆ ನೀವು ಪ್ರಾಣಿಗಳ ಜೊತೆ ಸಂಬಂಧ ಬೆಳೆಸಲು ಇಚ್ಛಿಸಿದ್ದೀರಿ ಎಂದರ್ಥವಲ್ಲ. ಅಂಥಹ ಗುಣಲಕ್ಷಣಗಳನ್ನು ನೀವು ಜೀವನದಲ್ಲಿ ಅಳವಡಿಸಿಕೊಳ್ಳಲು ಬಯಸುತ್ತಿದ್ದೀರಿ ಅಥವಾ ಅಳವಡಿಸಿಕೊಳ್ಳುತ್ತಿದ್ದೀರಿ ಎಂದರ್ಥ.

ಎರಡು ಅಥವಾ ಎರಡಕ್ಕಿಂತ ಹೆಚ್ಚು ಜನರ ಜೊತೆ ಸಂಬಂಧ ಬೆಳೆಸಿದಂತೆ ಕಂಡರೆ ನೀವು ಜನರು ಮುಂದೆ ಹೋಗುವುದನ್ನು ನೋಡುತ್ತಿದ್ದೀರಿ. ಆದ್ರೆ ನಿಮ್ಮ ಜೀವನದಲ್ಲಿ ಯಾವುದೇ ಬದಲಾವಣೆಯಾಗ್ತಿಲ್ಲ ಎಂದರ್ಥ.

For Latest News Updates, Join Our Whatsapp Community🚩
RELATED ARTICLES

Most Popular