HomeFeatured Newsʼಬಿಯರ್‌ʼ ಸೇವನೆಯಿಂದ ಬಂದಿರೋ ಹೊಟ್ಟೆ ʼಬೊಜ್ಜುʼ ಕರಗಿಸಲು ಹೀಗೆ ಮಾಡಿ….!

ʼಬಿಯರ್‌ʼ ಸೇವನೆಯಿಂದ ಬಂದಿರೋ ಹೊಟ್ಟೆ ʼಬೊಜ್ಜುʼ ಕರಗಿಸಲು ಹೀಗೆ ಮಾಡಿ….!

ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಆದರೆ ಮಿತಿಮೀರಿದ ಮದ್ಯಪಾನವು ಹಲವಾರು ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮದ್ಯದಿಂದ ತಯಾರಿಸಿದ ಹಲವಾರು ರೀತಿಯ ಪಾನೀಯಗಳು ಸಹ ಮಾರುಕಟ್ಟೆಯಲ್ಲಿವೆ. ಅವು ಕೂಡ ಹಾನಿಕಾರಕವೇ.

ಮದ್ಯಪ್ರಿಯರು ಇತ್ತೀಚಿನ ದಿನಗಳಲ್ಲಿ ಬಿಯರ್ ಕುಡಿಯಲು ಇಷ್ಟಪಡುತ್ತಾರೆ. ಆದರೆ ಬಿಯರ್ ಆರೋಗ್ಯಕ್ಕೆ ಅಪಾಯಕಾರಿ. ಅತಿಯಾದ ಪ್ರಮಾಣದಲ್ಲಿ ಬಿಯರ್ ಸೇವನೆಯಿಂದ ನಿದ್ರೆಯ ಕೊರತೆ, ಜೀರ್ಣಕಾರಿ ಸಮಸ್ಯೆಗಳು ಮತ್ತು ತಲೆನೋವು ಉಂಟಾಗಬಹುದು.

ಮತ್ತೊಂದೆಡೆ ನಿರಂತರವಾಗಿ ಬಿಯರ್ ಸೇವಿಸಿದರೆ ಬೊಜ್ಜಿನ ಸಮಸ್ಯೆಯೂ ಶುರುವಾಗುತ್ತದೆ. ಬಿಯರ್ ಸೇವನೆಯಿಂದ ಹೊಟ್ಟೆ ಬಂದಿದ್ದರೆ ಅದು ಗಂಭೀರವಾದ ಸಮಸ್ಯೆ. ಈ ಬೊಜ್ಜು ಮಧುಮೇಹ, ಅಸ್ತಮಾ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ಬೊಜ್ಜಿನ ನಿವಾರಣೆ ಹೇಗೆ ಅನ್ನೋದನ್ನು ನೋಡೋಣ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಮಾಡಿ: ನೀವು ಹೆಚ್ಚು ಬಿಯರ್ ಕುಡಿಯುತ್ತಿದ್ದರೆ ಅದನ್ನು ಕಡಿಮೆ ಮಾಡಿ. ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಕುಡಿಯುವುದರಿಂದ ಅಧಿಕ ಕ್ಯಾಲೋರಿಗಳು ದೇಹಕ್ಕೆ ಹೋಗುತ್ತವೆ. ಆದ್ದರಿಂದ ಪುರುಷರು ದಿನಕ್ಕೆ 2 ಗ್ಲಾಸ್ ಬಿಯರ್‌ ಗಿಂತ ಹೆಚ್ಚು ಕುಡಿಯಲೇಬಾರದು.

ಪೋಷಣೆಯ ಮೇಲೆ ಗಮನ ಕೇಂದ್ರೀಕರಿಸಿ: ನೀವು ಬಿಯರ್ ಸೇವಿಸಿದರೆ, ಆಹಾರ ಮತ್ತು ಪಾನೀಯದ ಬಗ್ಗೆಯೂ ಗಮನ ಹರಿಸಬೇಕು. ಯಾವಾಗಲೂ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು. ದೇಹಕ್ಕೆ ಸಾಕಷ್ಟು ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಪಡೆಯುತ್ತೀರಿ. ಇದು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಫೈಬರ್ ಹೊಂದಿರುವ ವಸ್ತುಗಳನ್ನು ತಿನ್ನಿರಿ: ನಿಮ್ಮ ಹೊಟ್ಟೆಯ ಸುತ್ತ ಕೊಬ್ಬು ಬೆಳೆದಿದ್ದರೆ ಫೈಬರ್ ಭರಿತ ವಸ್ತುಗಳನ್ನು ಸೇವಿಸಬೇಕು. ಫೈಬರ್ ಹೊಂದಿರುವ ಆಹಾರಗಳು ಹೃದ್ರೋಗ ಮತ್ತು ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಅವುಗಳನ್ನು ಪ್ರತಿದಿನ ಸೇವಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular