HomeLatest Newsರಾತ್ರಿ ಹೊತ್ತು ಉತ್ತಮ ನಿದ್ದೆ ಪಡೆಯಲು ಹೀಗೆ ಮಾಡಿ

ರಾತ್ರಿ ಹೊತ್ತು ಉತ್ತಮ ನಿದ್ದೆ ಪಡೆಯಲು ಹೀಗೆ ಮಾಡಿ

ರಾತ್ರಿ ಹೊತ್ತು ಉತ್ತಮ ನಿದ್ದೆ ಪಡೆಯಲು ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಈ ಕೆಲವು ವಸ್ತುಗಳನ್ನು ಸೇವಿಸುವುದು ಒಳ್ಳೆಯದು.

ರಾತ್ರಿ ನಿದ್ದೆ ಬರುತ್ತಿಲ್ಲವೇ, ಮಲಗುವ ಮುನ್ನ ಒಂದು ಬಾಳೆಹಣ್ಣು ತಿಂದು ನೋಡಿ. ಇದು ದೇಹದ ಹಾರ್ಮೋನ್ ಗಳಲ್ಲಿ ಬದಲಾವಣೆ ತಂದು ಉತ್ತಮ ಸುದೀರ್ಘ ನಿದ್ದೆ ನಿಮ್ಮದಾಗುವಂತೆ ಮಾಡುತ್ತದೆ. ಕಿವಿ ಹಣ್ಣಿನ ಸೇವನೆಯೂ ಬಹಳ ಒಳ್ಳೆಯದು.

ಕರುಂಕುರುಂ ಎನ್ನುವ ಪಾಪ್ ಕಾರ್ನ್ ಅನ್ನು ಮಲಗುವ ಮುನ್ನ ಸೇವಿಸುವುದರಿಂದ ಅತ್ಯಧಿಕ ಪ್ರಮಾಣದ ನಾರಿನಂಶ ನಿಮಗೆ ಸಿಗುತ್ತದೆ. ಇದರಿಂದ ರಾತ್ರಿ ಹಸಿವೆಯೂ ಆಗುವುದಿಲ್ಲ, ಸಹಜ ನಿದ್ದೆ ನಿಮ್ಮನ್ನು ಆವರಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾತ್ರಿ ಊಟಕ್ಕೆ ದಪ್ಪನೆಯ ಮೊಸರು ಬಳಸಿ ಊಟ ಮಾಡುವುದರಿಂದಲೂ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಅದರೆ ಕಫ, ಕೆಮ್ಮು ದಮ್ಮುವಿನ ಸಮಸ್ಯೆ ಇರುವವರು ಇದರಿಂದ ದೂರವಿರುವುದು ಒಳ್ಳೆಯದು. ನೆಲಕಡಲೆ ಚಿಕ್ಕಿ, ಓಟ್ ಮೀಲ್ಸ್ ಗಳು ಇದೇ ಪರಿಣಾಮವನ್ನು ಕೊಡುತ್ತವೆ.

For Latest News Updates, Join Our Whatsapp Community🚩
RELATED ARTICLES

Most Popular