HomeAstroದಿನವಿಡಿ ಶುಭಕರವಾಗಿರಲು ಬೆಳಿಗ್ಗೆ ಮಾಡಿ ಈ ಕೆಲಸ

ದಿನವಿಡಿ ಶುಭಕರವಾಗಿರಲು ಬೆಳಿಗ್ಗೆ ಮಾಡಿ ಈ ಕೆಲಸ

ಪ್ರತಿ ದಿನ ಒಂದೇ ರೀತಿ ಇರೋದಿಲ್ಲ. ಒಂದು ದಿನ ಶುಭಕರವಾಗಿದ್ದರೆ ಮತ್ತೊಂದು ದಿನ ನೋವು, ಬೇಸರ, ಗಲಾಟೆ ಇದ್ದೇ ಇರುತ್ತದೆ. ದಿನದ ಆರಂಭ ಚೆನ್ನಾಗಿದ್ದರೆ ದಿನ ಶುಭಕರವಾಗಿರುತ್ತದೆ ಎಂದು ನಂಬಲಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ನಾವು ಮನಸ್ಸು ಹಾಳಾಗುವಂತಹ ಕೆಲಸ ಮಾಡಿದ್ರೆ ದಿನವಿಡಿ ಕೆಟ್ಟದಾಗಿರುತ್ತದೆ. ಶುಭ ಕೆಲಸ, ದಿನವನ್ನು ಶುಭಕರವಾಗಿರಿಸುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ  ದೇವಸ್ಥಾನದ ಗಂಟೆ ಶಬ್ಧ ಅಥವಾ ಶಂಖದ ದ್ವನಿ ಕೇಳಿದ್ರೆ ಆ ದಿನ ಮಂಗಳಕರವಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಿಗ್ಗೆ ಹಾಸಿಗೆಯಿಂದ ಕೆಳಗೆ ಕಾಲಿಡುವ ಮೊದಲು ಎರಡೂ ಕೈಗಳ ರೇಖೆಯನ್ನು ನೋಡಿ ಮಂತ್ರ ಜಪಿಸಬೇಕು. ಹೀಗೆ ಮಾಡಿದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಹಾಸಿಗೆಯಿಂದ ಎದ್ದ ತಕ್ಷಣ ಇಷ್ಟದ ದೇವಾನುದೇವತೆಗಳ ದರ್ಶನ ಮಾಡಬೇಕು. ಇಷ್ಟ ದೇವರನ್ನು ನೆನೆದು ನಮಸ್ಕರಿಸಬೇಕು.

ದಿನ ಶುಭಕರವಾಗಿರಬೇಕೆನ್ನುವವರು ಬೆಳಿಗ್ಗೆ ಎದ್ದ ನಂತ್ರ ಸೂರ್ಯ ದರ್ಶನ ಪಡೆದು, ನಮಸ್ಕರಿಸಬೇಕು.

ಬೆಳ್ಳಂಬೆಳಿಗ್ಗೆ ಮನೆಯಿಂದ ಹೊರ ಹೋಗುವ ವೇಳೆ ಗೋವು ನಿಮ್ಮ ಕಣ್ಣಿಗೆ ಬಿದ್ದರೆ ಆ ದಿನ ಶುಭಕರವಾಗಿರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular