HomeFeatured Newsಬೇಸಿಗೆಯಲ್ಲಿ ಕಾಡುವ ಬಾಯಿಹುಣ್ಣಿನ ನಿವಾರಣೆಗೆ ಹೀಗೆ ಮಾಡಿ

ಬೇಸಿಗೆಯಲ್ಲಿ ಕಾಡುವ ಬಾಯಿಹುಣ್ಣಿನ ನಿವಾರಣೆಗೆ ಹೀಗೆ ಮಾಡಿ

ಬಾಯಿಹುಣ್ಣಿನ ಸಮಸ್ಯೆ ಉಷ್ಣದೇಹಿಗಳನ್ನು ಬಿಡದೆ ಕಾಡುತ್ತಿರುತ್ತದೆ. ಅದರ ನಿವಾರಣೆಗೆ ಕೆಲವು ಮನೆಮದ್ದುಗಳು ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ.

ತಣ್ಣನೆಯ ನೀರಿಗೆ ಎರಡು ಚಮಚ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಎರಡು ದಿನದೊಳಗೆ ಬಾಯಿ ಹುಣ್ಣು ಸಮಸ್ಯೆ ನಿವಾರಣೆಯಾಗುತ್ತದೆ. ದಿನದಲ್ಲಿ ಎರಡರಿಂದ ಮೂರು ಬಾರಿ ಹೀಗೆ ಮಾಡುವುದು ಒಳ್ಳೆಯದು.

ಬಾಯಿ ಹುಣ್ಣು ಆದ ಜಾಗಕ್ಕೆ ಜೇನನ್ನು ಸವರುವುದರಿಂದ ನೋವು ಕಡಿಮೆಯಾಗುತ್ತದೆ. ಗಂಟೆಗೊಮ್ಮೆ ಹೀಗೆ ಮಾಡುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೋಳೆರಸವನ್ನು, ಇಲ್ಲವೇ ಪರಿಶುದ್ಧವಾದ ತೆಂಗಿನೆಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ಹುಣ್ಣು ಒಣಗುತ್ತದೆ. ನೋವು ಕಡಿಮೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular