HomeEntertainmentನಿರ್ದೇಶಕ ಸೂರ್ಯ ವಿರುದ್ಧ ನಟಿ ಅಮೂಲ್ಯ ಗೌಡ ದೂರು ದಾಖಲು

ನಿರ್ದೇಶಕ ಸೂರ್ಯ ವಿರುದ್ಧ ನಟಿ ಅಮೂಲ್ಯ ಗೌಡ ದೂರು ದಾಖಲು

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಅಶ್ಲೀಲ ಸಂದೇಶ ರವಾನಿಸಿ, ಕರೆ ಮಾಡಿ ಕಿರುಕುಳ ನೀಡುತ್ತಿರುವ ಆರೋಪ ನಿರ್ದೇಶಕ ಸೂರ್ಯ ವಿರುದ್ಧ ಕೇಳಿಬಂದಿದೆ.

ನಟಿ ಅಮೂಲ್ಯ ಗೌಡ ನಿರ್ದೇಶಕ ಸೂರ್ಯ ವಿರುದ್ಧ ಆರ್.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ನಿರ್ದೇಶಕ ಸೂರ್ಯ  ಆಡಿಷನ್ ಗೆ ಕರೆಯುವ ನೆಪದಲ್ಲಿ ವಾಟ್ಸಾಪ್ ಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ. ಅಲ್ಲದೇ ಕರೆ ಮಾಡಿ ಕಿರುಕುಳ ನೀಡಿದ್ದಾರೆ. ಇದನ್ನು ಪ್ರಶಿಸಿದ್ದಕ್ಕೆ ಆವಾಜ್ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಸಂಬಂಧ ಏಪ್ರಿಲ್ 30ರಂದು ನಟಿ ಅಮೂಲ್ಯ ಗೌಡ ಆರ್.ಆರ್,ನಗರ ಠಾಣೆಯಲ್ಲಿ ನಿರ್ದೇಶಕ ಸೂರ್ಯ ವಿರುದ್ಧ ದೂರು ದಾಖಲಿಸಿದ್ದು, ಇಂದು ನಿರ್ದೇಶಕ ಸೂರ್ಯನನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular