HomeKarnatakaDinner Party : ಸೌಜನ್ಯದ ಭೇಟಿಗೆ ಊಟಕ್ಕೆ ಸೇರಿದ್ವಿ, ಯಾವ ವಿಚಾರವೂ ಚರ್ಚೆಯಾಗಿಲ್ಲ : ಗೃಹ...

Dinner Party : ಸೌಜನ್ಯದ ಭೇಟಿಗೆ ಊಟಕ್ಕೆ ಸೇರಿದ್ವಿ, ಯಾವ ವಿಚಾರವೂ ಚರ್ಚೆಯಾಗಿಲ್ಲ : ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ

ತುಮಕೂರು : ಸೌಜನ್ಯದ ಭೇಟಿಗೆ ನಾವು ಊಟಕ್ಕೆ ಸೇರಿದ್ವಿ, ಆದರೆ ಈ ವೇಳೆ ಯಾವ ವಿಚಾರವೂ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರ ಸದಾಶಿವನಗರ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ಈ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ‘ಸೌಜನ್ಯದ ಭೇಟಿ ಊಟಕ್ಕೆ ಸೇರಿದ್ದೆವು. ಊಟ ಮಾಡಿ ಅವರ ಮನೆಗೆ ಅವರು ಹೋದರು. ನಮ್ಮ ಮನೇಲಿ ನಾನು ಉಳಿದುಕೊಂಡೆ. ನಿಗಮ ಮಂಡಳಿಯ ಬಗ್ಗೆ ಇಲ್ಲಿ ಚರ್ಚೆ ಮಾಡೋಕಾಗುತ್ತಾ..?. ಯಾವ ವಿಚಾರವಾಗಿಯೂ ಚರ್ಚೆ ಆಗಲಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೂ, ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ‘ ನಾನು ಸಿಎಂ ಎಲ್ಲಾ ಊಟಕ್ಕೆ ಬಂದಿದ್ವಿ. ನಾವು ಸೇರಿದ ಮೇಲೆ ರಾಜಕೀಯ ಅಲ್ಲದೇ ಬೇರೆ ಏನು ಮಾತಾಡೋದು..?. ಸಣ್ಣಪುಟ್ಟ ರಾಜಕೀಯ ಚರ್ಚೆಯಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular